ETV Bharat / international

ಅಮೆರಿಕ,ಇರಾನ್ ಮಿಲಿಟರಿ ಬಲಾಬಲ ಹೇಗಿದೆ ಗೊತ್ತೇ?

ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆ ನಂತರ ಇರಾನ್ ಜಿದ್ದಿಗೆ ಬಿದ್ದು ಅಮೆರಿಕ ಜೊತೆ ಕಾಳಗಕ್ಕಿಳಿದಿದ್ದು ಉಭಯ ದೇಶಗಳ ನಡುವಿನ ವೈಷಮ್ಯ ತಾರಕಕ್ಕೇರಿದೆ.

Military strengths of US-Iran,ಯುದ್ಧೋನ್ಮಾದದಲ್ಲಿ ಅಮೆರಿಕ-ಇರಾನ್
ಯುದ್ಧೋನ್ಮಾದದಲ್ಲಿ ಅಮೆರಿಕ-ಇರಾನ್
author img

By

Published : Jan 8, 2020, 10:46 PM IST

ಹೈದರಾಬಾರ್: ಇರಾನ್ ಕುದ್ಸ್‌ ಫೋರ್ಸ್ ಮುಖ್ಯಸ್ಥ ಜನರಲ್‌ ಕಾಸಿಮ್‌ ಸುಲೇಮಾನಿಯನ್ನು ಅಮೆರಿಕ ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಿದ್ದು ಇದೀಗ ಇಡೀ ಪ್ರಪಂಚಕ್ಕೆ ತಲೆನೋವು ತರಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಇದೀಗ ಕೇವಲ ಆ ಎರಡು ರಾಷ್ಟ್ರಗಳ ಸಮಸ್ಯೆಯಾಗಿ ಉಳಿದಿಲ್ಲ. ಯಾವುದರ ಆಗಮನವನ್ನು ಇಡೀ ಪ್ರಪಂಚ ನಿರೀಕ್ಷಿಸಿರಲಿಲ್ಲವೋ ಅಂಥದ್ದೊಂದು ಮಹಾ ಅನಾಹುತದ ಅರಂಭದಲ್ಲಿದ್ದೇವೆ. ಸುಲೇಮಾನಿ ಹತ್ಯೆ ನಂತರ ಪರಸ್ಪರ ಜಿದ್ದಿಗೆ ಬಿದ್ದಿರುವ ಅಮೆರಿಕ ಮತ್ತು ಇರಾನ್ ತಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿವೆ.

ಒಂದು ವೇಳೆ ಈ ರೀತಿಯ ದಾಳಿಗಳು ಮುಂದುವರಿದರೆ 3ನೇ ಮಹಾಯುದ್ಧ ನಡೆದರೂ ಅಚ್ಚರಿ ಇಲ್ಲ. ಪರಸ್ಪರ ದಾಳಿ ಮೂಲಕ ಕಾಳಗ ನಡೆಸುತ್ತಿರುವ ಇರಾನ್ ಮತ್ತು ಅಮೆರಿಕ ಮಿಲಿಟರಿ ಬಲಾಬಲ ನೋಡುವುದಾದರೆ ಸಹಜವಾಗಿಯೇ ಅಮೆರಿಕ, ಇರಾನ್​ಗಿಂತಲೂ ಬಲಾಢ್ಯವಾಗಿದೆ.

ಪ್ರಪಂಚದಲ್ಲೇ ಅತ್ಯುತ್ತಮ ಸೇನಾಪಡೆ ಹೊಂದಿರುವ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಇರಾನ್ 14ನೇ ಸ್ಥಾನದಲ್ಲಿದೆ.

Military strengths of US-Iran,ಯುದ್ಧೋನ್ಮಾದದಲ್ಲಿ ಅಮೆರಿಕ-ಇರಾನ್
ಉಭಯ ದೇಶಗಳ ಮಿಲಿಟರಿ ಬಲಾಬಲ

ಅಮೆರಿಕ ಬಳಿ 12 ಲಕ್ಷದ 81 ಸಾವಿರದ 900 ಸಕ್ರಿಯ ಸೇನಾ ಪಡೆ ಇದ್ದು, ಒಟ್ಟಾರೆ 14 ಕೋಟಿ 48 ಲಕ್ಷ 71 ಸಾವಿರದ 845 ಬೆಂಚ್ ಸಾಮರ್ಥ್ಯವಿದೆ. ಇರಾನ್‌ ಬಳಿ ಕೇವಲ 5 ಲಕ್ಷದ 23 ಸಾವಿರ ಸಕ್ರಿಯ ಸೈನಿಕರಿದ್ದರೆ, 4 ಕೋಟಿ 73 ಲಕ್ಷ 24 ಸಾವಿರದ105 ಒಟ್ಟಾರೆ ಮಿಲಿಟರಿ ಶಕ್ತಿ ಇದೆ.

ಇರಾನ್ ಬಳಿ 8 ಸಾವಿರದ 577 ಟ್ಯಾಂಕ್‌ಗಳು, ವಾಹನಗಳು ಮತ್ತು ಫಿರಂಗಿಗಳಿವೆ. ಅಮೆರಿಕ ಇರಾನ್​ಗಿಂತಲೂ ಆರು ಪಟ್ಟು ಹೆಚ್ಚು ಅಂದರೆ ಒಟ್ಟು 48 ಸಾವಿರದ 422 ಟ್ಯಾಂಕ್‌ಗಳು, ವಾಹನಗಳು ಮತ್ತು ಫಿರಂಗಿಗಳನ್ನು ಹೊಂದಿದೆ.

ಇರಾನ್‌ಗೆ ಹೋಲಿಸಿದರೆ ಅಮೆರಿಕ ಪ್ರಬಲ ನೌಕಾ ಶಕ್ತಿಯನ್ನು ಹೊಂದಿದೆ. ಅಮೆರಿಕ 415 ಹಡಗುಗಳು, ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ್ದರೆ, ಇರಾನ್ 398 ಹಡಗುಗಳು, ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ.

ಉಭಯ ರಾಷ್ಟ್ರಗಳ ವಾಯುಶಕ್ತಿಯನ್ನು ಗಣನೆಗೆ ತೆಗೆದುಕೊಂಡಾಗ ಯುಎಸ್, ಇರಾನ್‌ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಅಮೆರಿಕ 10,170 ವಿಮಾನಗಳು, ಹೆಲಿಕಾಪ್ಟರ್ ಹೊಂದಿದ್ದರೆ, ಇರಾನ್‌ ಕೇವಲ 512 ವಿಮಾನಗಳನ್ನು ಹೊಂದಿದೆ.

ಅಮೆರಿಕ 716 ಬಿಲಿಯನ್ ಅಮೆರಿಕ ಡಾಲರ್​ಗಳನ್ನು ರಕ್ಷಣಾ ಬಜೆಟ್​ಗೆ ಖರ್ಚು ಮಾಡಿದರೆ, ಇರಾನ್ 6.3 ಬಿಲಿಯನ್ ಡಾಲರ್ ಅಂದರೆ ಅಮೆರಿಕಗಿಂತ 100 ಪಟ್ಟು ಕಡಿಮೆ ಖರ್ಚು ಮಾಡುತ್ತದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.