ETV Bharat / international

ಚೀನಾಗೆ ಯುಎಸ್ ಶಾಕ್: ಮತ್ತೆ 4 ಕಂಪನಿಗಳು ಕಪ್ಪು ಪಟ್ಟಿಗೆ ಸೇರ್ಪಡೆ

ಡ್ರ್ಯಾಗನ್ ರಾಷ್ಟ್ರದ ವಿರುದ್ಧ ವಿಶ್ವದ ದೊಡ್ಡಣ್ಣ ಅಮೆರಿಕ ಸಮರ ಮುಂದುವರಿಸಿದ್ದು ಮತ್ತೆ ನಾಲ್ಕು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

tech
ಅಮೆರಿಕಾ
author img

By

Published : Dec 4, 2020, 1:23 PM IST

ವಾಷಿಂಗ್ಟನ್ : ಚೀನಾ ಹಾಗೂ ಅಮೆರಿಕ ನಡುವೆ ಶೀತಲ ಸಮರ ಮುಂದುವರಿದಿದೆ. ಈ ಮಧ್ಯೆ ನಾಲ್ಕು ಬೃಹತ್ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಡ್ರ್ಯಾಗನ್ ರಾಷ್ಟ್ರಕ್ಕೆ ಯುಎಸ್​ ಮತ್ತೆ ಆಘಾತ ನೀಡಿದೆ. ಈ ಮೂಲಕ ಈವರೆಗೆ ಕಪ್ಪು ಪಟ್ಟಿಗೆ ಸೇರಿಸಿರುವ ಕಂಪನಿಗಳ ಸಂಖ್ಯೆ 30ಕ್ಕೆ ಏರಿದೆ.

ಬೀಜಿಂಗ್​ನ ಚಿಪ್​ ಮೇಕರ್ ಎಸ್​ಎಂಐಸಿ ಮತ್ತು ತೈಲ ಕಂಪನಿ ಸೇರಿ ನಾಲ್ಕು ಬೃಹತ್ ಕಂಪನಿಗಳನ್ನು ಚೀನಾದ ಕಮ್ಯುನಿಸ್ಟ್ ಮಿಲಿಟರಿ ನಿಯಂತ್ರಿಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್​​ ಆಡಳಿತ ಹೇಳಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ (DOD) ತಿಳಿಸಿದೆ.

ಚೀನಾ ಕನ್ಸ್​​ಟ್ರಕ್ಷನ್ ಟೆಕ್ನಾಲಜಿ ಕಂಪನಿ (ಸಿಸಿಟಿಸಿ), ಚೀನಾ ಇಂಟರ್​ನ್ಯಾಷನಲ್ ಎಂಜಿನಿಯರಿಂಗ್ ಕನ್ಸಲ್ಟಿಂಗ್ ಕಾರ್ಪ್ (ಸಿಐಇಸಿಸಿ), ಚೀನಾ ನ್ಯಾಷನಲ್ ಆಫ್‌ಶೋರ್ ಆಯಿಲ್ ಕಾರ್ಪೊರೇಷನ್ (ಸಿಎನ್‌ಒಒಸಿ), ಮತ್ತು ಸೆಮಿ ಕಂಡಕ್ಟರ್ ಮ್ಯಾನಿಫ್ಯಾಕ್ಚರಿಂಗ್ ಇಂಟರ್​​ನ್ಯಾಷನಲ್ ಕಾರ್ಪೊರೇಷನ್ (ಎಸ್‌ಎಂಐಸಿ) ಕಂಪನಿಗಳ ಮೇಲೆ ಕಮ್ಯುನಿಸ್ಟ್ ಪಕ್ಷ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಿಡಿತ ಸಾಧಿಸುತ್ತಿದೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.

ಚೀನಾ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿದೆ. 2 ನೇ ಮಹಾಯುದ್ಧದ ನಂತರ ಚೀನಾ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ದೊಡ್ಡ ಜಾಗತಿಕ ಬೆದರಿಕೆ ಒಡ್ಡುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕ ಜಾನ್ ರ‍್ಯಾಟ್​​ಕ್ಲಿಫ್ ಹೇಳಿದ್ದಾರೆ.

ಟ್ರಂಪ್ ಆಡಳಿತವು ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಯುಎಸ್ ಸಂದರ್ಶಕರ ವೀಸಾ ಮಾನ್ಯತೆಯ ಅವಧಿಯನ್ನು ಹತ್ತು ವರ್ಷದಿಂದ ಒಂದು ತಿಂಗಳಿಗೆ ಇಳಿಸಿತ್ತು. ಅದಕ್ಕೂ ಮೊದಲು, ಚೀನಾದ ಕಂಪನಿಗಳು ದೇಶದ ಲೆಕ್ಕಪರಿಶೋಧಕ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸದಿದ್ದರೆ ಯುಎಸ್ ಷೇರು ವಿನಿಮಯ ಕೇಂದ್ರಗಳಿಂದ ದೂರವಿಡುವ ಕಾನೂನುಗಳನ್ನು ಜಾರಿಗೆ ತಂದಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.