ETV Bharat / international

ಮ್ಯಾನ್ಮಾರ್​ಗೆ ತೆರಳದಂತೆ ತನ್ನ ನಾಗರಿಕರಿಗೆ ಅಮೆರಿಕ ಸೂಚನೆ

author img

By

Published : Mar 31, 2021, 9:13 AM IST

ಕೋವಿಡ್ -19 ಮತ್ತು ನಾಗರಿಕ ಅಶಾಂತಿ ಮತ್ತು ಮಿಲಿಟರಿ ಹಿಂಸಾಚಾರದ ಕಾರಣದಿಂದಾಗಿ" ಆಗ್ನೇಯ ಏಷ್ಯಾದ ದೇಶವನ್ನು ತೊರೆಯುವಂತೆ ಎಲ್ಲಾ ತುರ್ತುರಹಿತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಆದೇಶ ನೀಡಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಸಲಹೆ ನೀಡಿದೆ.

Myanmar unrest
ಹಿಂಸಾಚಾರ

ವಾಷಿಂಗ್ಟನ್​ ​:ಮ್ಯಾನ್ಮಾರ್‌ಗೆ ಹೋಗಬೇಡಿ ಎಂದು ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಕೊರೊನಾ 4 ನೇ ಹಂತದ ಹದಗೆಡುತ್ತಿರುವ ಪರಿಸ್ಥಿತಿಯ ಮಧ್ಯೆ ಪ್ರಯಾಣ ಮಾರ್ಗಸೂಚಿಗಳನ್ನ ಹೆಚ್ಚಿಸಿದೆ.

ಕೋವಿಡ್ -19 ಮತ್ತು ಅಶಾಂತಿ ಮತ್ತು ಹಿಂಸಾಚಾರದ ಪ್ರದೇಶಗಳಿಂದಾಗಿ ಅಮೆರಿಕ ಎಲ್ಲ ತುರ್ತುರಹಿತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರನ್ನು ಆಗ್ನೇಯ ಏಷ್ಯಾದ ದೇಶದಿಂದ ಹೊರಹೋಗುವಂತೆ ಆದೇಶಿಸಿದೆ ಎಂದು ಹೇಳಲಾಗಿದೆ. ಫೆಬ್ರವರಿ 14 ರಂದು ತುರ್ತುರಹಿತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ "ಸ್ವಯಂಪ್ರೇರಿತ ನಿರ್ಗಮನ" ಕ್ಕೆ ಇಲಾಖೆ ಅವಕಾಶ ನೀಡಿತ್ತು. ಕೋವಿಡ್​-19 ಕಾರಣದಿಂದಾಗಿ ಸಿಡಿಸಿ ಬರ್ಮಾಗೆ 4 ನೇ ಹಂತದ ಹೆಲ್ತ್​ ನೋಟಿಸ್ ನೀಡಿದೆ ಎಂದು ಸಲಹೆಗಾರರು ತಿಳಿಸಿದ್ದಾರೆ.

ಚುನಾಯಿತ ಸರ್ಕಾರಿ ಅಧಿಕಾರಿಗಳನ್ನು ಬರ್ಮೀಸ್ ಮಿಲಿಟರಿ ವಶಕ್ಕೆ ತೆಗೆದುಕೊಂಡು ಪದಚ್ಯುತಗೊಳಿಸಿದೆ. ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆಗಳು ಮುಂದುವರಿಯುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿನ ನಾಗರಿಕರಿಗೆ "ತುರ್ತು ಸೇವೆಗಳನ್ನು ಒದಗಿಸುವ ಸೀಮಿತ ಸಾಮರ್ಥ್ಯವನ್ನು ಯುಎಸ್ ಸರ್ಕಾರ ಹೊಂದಿದೆ" ಎಂದೂ ಇದೇ ವೇಳೆ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.