ETV Bharat / international

ಮುಂದುವರಿದ ರಷ್ಯಾ ಆಕ್ರಮಣ.. ಉಕ್ರೇನ್​ ಸ್ಥಿತಿ ಇನ್ನಷ್ಟು ಭೀಕರ.. 2 ಸಾವಿರ ನಾಗರಿಕರ ಸಾವು

ಉಕ್ರೇನ್​ ಮೇಲಿನ ರಷ್ಯಾ ಮಿಲಿಟರಿ ಕಾರ್ಯಾಚರಣೆ ಭೀಕರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್​ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.

Russia Ukraine  war
ರಷ್ಯಾ ಉಕ್ರೇನ್​ ಯುದ್ಧ
author img

By

Published : Mar 3, 2022, 7:09 AM IST

ಕೀವ್​(ಉಕ್ರೇನ್)​​: ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಉಕ್ರೇನ್​​ ಮೇಲಿನ ರಷ್ಯಾ ದಾಳಿಗೆ ಉಕ್ರೇನ್​ ತತ್ತರಿಸಿದೆ. ನಾವು ನೋವು ಹೆಚ್ಚುತ್ತಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಬುಧವಾರದಂದು ರಷ್ಯಾ ಪಡೆಗಳು ಎರಡು ಉಕ್ರೇನಿಯನ್ ಬಂದರುಗಳಿಗೆ ಮುತ್ತಿಗೆ ಹಾಕಿವೆ.

ಉಕ್ರೇನ್​​ನ ಎರಡನೇ ಅತಿ ದೊಡ್ಡ ನಗರದ ಮೇಲೆ ಬಾಂಬ್​ ದಾಳಿ ನಡೆಸಿದೆ. ಹಲವು ಭಾಗಗಳಲ್ಲಿ ಸಾರಿಗೆ ಸೌಲಭ್ಯಗಳು, ಆಸ್ಪತ್ರೆಗಳು, ಶಿಶು ವಿಹಾರ, ವಸತಿ ಕಟ್ಟಡಗಳು, ವಿಶ್ವವಿದ್ಯಾಲಯ, ಜನವಸತಿ ಕಟ್ಟಡಗಳು ಸಂಪೂರ್ಣವಾಗಿ ನೆಲಸಮವಾಗಿದೆ. ಅದರಲ್ಲೂ​​ ಖಾರ್ಕಿವ್‌ ನಗರದ ಸಿಟಿ ಕೌನ್ಸಿಲ್ ಕಟ್ಟಡ, ಲೇಬರ್ಸ್​ ಪ್ಯಾಲೇಸ್ ಸೇರಿ ಬಹುಮಹಡಿ ಕಟ್ಟಡಗಳು ಹಾನಿಗೊಂಡಿವೆ.

ಉಕ್ರೇನ್​ ಮೇಲಿನ ಆಕ್ರಮಣವನ್ನು ರಷ್ಯಾ ನಿಲ್ಲಿಸಬೇಕೆಂದು ಹಲವು ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿವೆ. ಆದರೆ, ಮಾಸ್ಕೋ ಮಾತ್ರ ಎಂದಿನಂತೆ ವಿರೋಧ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ​​ ಪ್ರಾಸಿಕ್ಯೂಟರ್ ಸಂಭವನೀಯ ಯುದ್ಧ ಅಪರಾಧಗಳ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.

ಕಳೆದ ವಾರ ಉಕ್ರೇನ್​ ಮೇಲೆ ಆಕ್ರಮಣ ಪ್ರಾರಂಭವಾದ ನಂತರ ರಷ್ಯಾ ತನ್ನ ಸೈನಿಕರ ಸಾವುನೋವುಗಳನ್ನು ಮೊದಲ ಬಾರಿಗೆ ವರದಿ ಮಾಡಿದೆ. ಸುಮಾರು 500 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು 1,600 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಉಕ್ರೇನ್ ತನಗಾದ ಮಿಲಿಟರಿ ನಷ್ಟದ ಬಗ್ಗೆ ಬಹಿರಂಗಪಡಿಸಲಿಲ್ಲ. ಆದರೆ 2,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಇನ್ನೂ ರಷ್ಯಾ ಪಡೆಗಳು ಖೆರ್ಸನ್‌ ಪ್ರದೇಶವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ರಷ್ಯಾ ಹೇಳಿಕೊಂಡಿದೆ. ಆದರೆ, ಇದು ಆಕ್ರಮಣಕ್ಕೆ ತುತ್ತಾಗದ ಅತಿದೊಡ್ಡ ನಗರವಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಇದನ್ನು ವಿವಾದಿಸಿದ್ದಾರೆ. ಇನ್ನೂ ಹೋರಾಟ ಮುಂದುವರಿದಿರುವುದರಿಂದ ಖೆರ್ಸನ್​ ನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಚೇರಿ ತಿಳಿಸಿದೆ.

ಇದನ್ನೂ ಓದಿ: 'ಉಕ್ರೇನ್​​ನಲ್ಲಿ ಈವರೆಗೆ 2,000 ನಾಗರಿಕರು, ರಷ್ಯಾದ 6,000 ಯೋಧರ ಸಾವು'

ಹೀಗೆ ಉಕ್ರೇನ್​ನ ಹಲವು ಭಾಗಗಳು ರಷ್ಯಾ ತುತ್ತಾಗಿದ್ದು, ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಉಕ್ರೇನ್​ ಅಧ್ಯಕ್ಷರು ರಷ್ಯಾ ಮಿಲಿಟರಿ ಪಡೆಯ 6 ಸಾವಿರ ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಉಕ್ರೇನ್‌ನಲ್ಲಿ ಇಲ್ಲಿಯವರೆಗೆ 2 ಸಾವಿರಕ್ಕೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್‌ ತುರ್ತು ಸೇವಾ ವಿಭಾಗ ತಿಳಿಸಿದೆ. ಆದರೆ, ರಷ್ಯಾ ತಮ್ಮ 500 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.