ವೆಲ್ಲಿಂಗ್ಟನ್: ಉತ್ತರ ನ್ಯೂಜಿಲ್ಯಾಂಡ್ನ ನ್ಯೂ ಕ್ಯಾಲೆಡೋನಿಯಾ ಬಳಿ 7.7 ತೀವ್ರತೆಯ ಭೂಗತ ಭೂಕಂಪದಿಂದ ಉಂಟಾದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಲಾರ್ಡ್ ಹೋವೆ ದ್ವೀಪದಲ್ಲಿ ನೀಡಿದ್ದ ಸುನಾಮಿ ಎಚ್ಚರಿಕೆ ರದ್ದುಗೊಂಡಿದೆ.
ಭೂಕಂಪನದಿಂದ ಸಣ್ಣ ಪ್ರಮಾಣ ಸುನಾಮಿ ಅಲೆಗಳು ನಾರ್ಫೋಕ್ ದ್ವೀಪಕ್ಕೆ ಅಪ್ಪಳಿಸಿದ್ದವು. ಈ ಬಳಿಕ ನ್ಯೂ ಸೌತ್ ವೇಲ್ಸ್ ತೀರದಿಂದ 700 ಕಿ.ಮೀ ದೂರದಲ್ಲಿರುವ ಲಾರ್ಡ್ ಹೋವೆ ದ್ವೀಪಕ್ಕೆ ಸಮುದ್ರ ಸುನಾಮಿಯ ಸಂಭವನೀಯ ಎಚ್ಚರಿಕೆಗಳನ್ನು ನೀಡಿತ್ತು.
ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಭೂಕಂಪ ಸಂಭವಿಸಿದ್ದು, ತಾಸ್ಮನ್ ಸಮುದ್ರದಾದ್ಯಂತ ತರಂಗಗಳು ಹಬ್ಬಿದ್ದವು. ಲಾರ್ಡ್ ಹೋವೆ ದ್ವೀಪಕ್ಕೆ ಆಸ್ಟ್ರೇಲಿಯಾದ ಸುನಾಮಿ ಎಚ್ಚರಿಕೆ ಕೇಂದ್ರವು ಶೀಘ್ರವಾಗಿ ಎಚ್ಚೆತ್ತುಕೊಳ್ಳುವಂತೆ ಸಂದೇಶ ನೀಡಿ, ಕಡಲತೀರಗಳಿಂದ ದೂರವಿರಲು ನಿವಾಸಿಗರಿಗೆ ಸೂಚಿಸಿತ್ತು.
ಮುಖ್ಯ ಸುನಾಮಿ ಅಲೆಗಳು ಈಗ ಎಲ್ಲಾ ನಿರೀಕ್ಷಿತ ಲಾರ್ಡ್ ಹೋವೆ ದ್ವೀಪದ ಪ್ರದೇಶಗಳನ್ನು ದಾಟಿ ಮುಂದೆ ಹೋಗಿವೆ. ಸಣ್ಣದಾದ ಅಸಾಮಾನ್ಯ ಅಲೆಗಳು ಮುಂದುವರಿಯಬಹುದು. ಆದರೆ ಲಾರ್ಡ್ ಹೋವೆ ದ್ವೀಪದ ಸುನಾಮಿ ಎಚ್ಚರಿಕೆಗಳನ್ನು ರದ್ದುಪಡಿಸಲಾಗಿದೆ. ಕರಾವಳಿ ಪ್ರದೇಶಗಳಿಗೆ ಸುರಕ್ಷಿತವಾಗಿ ಮರಳಲು ಎನ್‌ಎಸ್‌ಡಬ್ಲ್ಯೂ ತುರ್ತು ಸೇವೆ ಎಲ್ಲ ತೆರವುಗೊಳಿಸಲು ಸಲಹೆ ನೀಡುತ್ತದೆ ಎಂದು ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಟ್ವಿಟ್ ಮಾಡಿದೆ.
ಯಾವುದೇ ಸ್ಥಳಾಂತರಿಸುವ ಅಗತ್ಯವಿಲ್ಲ. ಬೆಳಗ್ಗೆ 7 ಗಂಟೆಯ ನಂತರ ಸುನಾಮೆ ಎಚ್ಚರಿಕೆ ರದ್ದಾಗಿದೆ. ಎಲ್ಲಾ ಪ್ರಮುಖ ಸುನಾಮಿ ಅಲೆಗಳು ದ್ವೀಪಕ್ಕೆ ಯಾವುದೇ ಹಾನಿ ಮಾಡದೆ ಹಾದುಹೋಗುತ್ತವೆ. ಒರಟಾದ ಮತ್ತು ಅಸಾಮಾನ್ಯವಾದ ಪರಿಸ್ಥಿತಿ ಕೆಲ ಸಮಯದವರೆಗೆ ಮುಂದುವರಿಯಬಹುದು ಎಂದು ಬ್ಯೂರೋ ಮಾಹಿತಿ ನೀಡಿದೆ.