ETV Bharat / international

ಚೀನಾದಲ್ಲಿ ಮತ್ತೆ ಕೊರೊನಾ ಮರುಕಳಿಸುವ ಭೀತಿ: ಉನ್ನತ ಆರೋಗ್ಯಾಧಿಕಾರಿ ಎಚ್ಚರಿಕೆ

author img

By

Published : May 4, 2020, 12:59 PM IST

ಕಳೆದ 14 ದಿನಗಳಲ್ಲಿ 10 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹರಡಿದ ಪಾಸಿಟಿವ್​ ಅಥವಾ ಶಂಕಿತ ಪ್ರಕರಣಗಳನ್ನು ವರದಿ ಮಾಡಿವೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ತಿಳಿಸಿದ್ದಾರೆ. ಇದು ಈ ಸಾಂಕ್ರಾಮಿಕ ರೋಗದ ಹರಡುವಿಕೆ ಇನ್ನೂ ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ಎತ್ತಿ ತೋರಿಸುತ್ತಿದೆ ಎಂದು ಇಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.

corona
ಕೊರೊನಾ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ ಆವರಿಸಿದೆ. ಈ ಬಗ್ಗೆ ಉನ್ನತ ಆರೋಗ್ಯಾಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ವಾರಗಳಲ್ಲಿ 10 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹರಡಿದ ಕೊರೊನಾ ಪ್ರಕರಣಗಳು ವರದಿಯಾಗಿರುವುದರಿಂದ ಚೀನಾದಲ್ಲಿ ಇನ್ನೂ ಕೋವಿಡ್​-19 ಕಂಟಕ ಮರುಕಳಿಸುವ ಅಪಾಯ ಎದುರಾಗಿದೆ ಎಂದು ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಸೋಮವಾರ ಎಚ್ಚರಿಸಿದ್ದಾರೆ.

ಕಳೆದ ಭಾನುವಾರ ಮೂರು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂವರೂ ವಿದೇಶದಿಂದ ಬಂದ ಚೀನೀಯರು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (NHC) ತಿಳಿಸಿದೆ. ಅಲ್ಲದೆ, 13 ಹೊಸ ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ. ಭಾನುವಾರದವರೆಗೆ, ವಿದೇಶದಿಂದ ಬಂದ 98 ಪ್ರಕರಣಗಳು ಸೇರಿದಂತೆ 962 ಶಂಕಿತ ಪ್ರಕರಣಗಳ ವರದಿ ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿವೆ ಎಂದು ಎನ್‌ಹೆಚ್‌ಸಿ ತಿಳಿಸಿದೆ.

ಕಳೆದ 14 ದಿನಗಳಲ್ಲಿ 10 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹರಡಿದ ಪಾಸಿಟಿವ್​ ಅಥವಾ ಶಂಕಿತ ಪ್ರಕರಣಗಳನ್ನು ವರದಿ ಮಾಡಿವೆ ಎಂದು ಎನ್‌ಹೆಚ್‌ಸಿ ವಕ್ತಾರ ಮಿ ಫೆಂಗ್ ತಿಳಿಸಿದ್ದಾರೆ. ಇದು ಈ ಸಾಂಕ್ರಾಮಿಕ ರೋಗದ ಹರಡುವಿಕೆ ಇನ್ನೂ ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ಎತ್ತಿ ತೋರಿಸುತ್ತಿದೆ ಎಂದು ಇಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಅನೇಕ ಕಚೇರಿಗಳು, ವ್ಯವಹಾರ ಕೇಂದ್ರ ಹಾಗೂ ಪ್ರವಾಸಿ ತಾಣಗಳನ್ನು ಪುನಃ ತೆರೆಯಲಾಗಿದ್ದರೂ, ಕೆಲ ಸಾರ್ವಜನಿಕ ಸ್ಥಳಗಳಾದ ಚಿತ್ರಮಂದಿರ ಮತ್ತು ಆರ್ಕೇಡ್‌ಗಳನ್ನು ಮುಚ್ಚಲಾಗಿದೆ.

ಚೀನಾದಲ್ಲಿ ಕಳೆದ ಭಾನುವಾರ ಹೊಸ ಸಾವು - ನೋವುಗಳು ವರದಿಯಾಗಿಲ್ಲ. ಹೀಗಾಗಿ ದೇಶದ ಕೊರೊನಾ ಸಾವಿನ ಸಂಖ್ಯೆ 4,633 ಆಗಿದೆ. ಈವರೆಗೆ ಒಟ್ಟು 82,880 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ 481 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 77,766 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.