ಟೆಹ್ರಾನ್: ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಪ್ರಮುಖ ಸಲಹೆಗಾರನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಅಲಿ ಅಕ್ಬರ್ ವೇಲಾಯತಿ ಕೊರೊನಾ ಲಕ್ಷಣ ಕಂಡುಬಂದ ಸಲಹೆಗಾರ. ವೇಲಾಯತಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ವಿದೇಶಿ ವ್ಯವಹಾರಗಳ ಪ್ರಮುಖ ಸಲಹೆಗಾರನಾಗಿದ್ದಾನೆ.
74 ವರ್ಷದ ವೇಲಾಯತಿಗೆ ಬುಧವಾರ ಮಧ್ಯಾಹ್ನದ ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅವರನ್ನು ಮನೆಗೆ ಕರೆದುಕೊಂಡು ಹೋಗಿ ನಿಗಾ ಇರಿಸಲಾಗಿದೆ. ಅಲಿ ಅಕ್ಬರ್ ವೇಲಾಯತಿಗೆ ಸೋಂಕು ತಗುಲಿರುವ ಬಗ್ಗೆ ಇದುವರೆಗೂ ದೃಢಪಟ್ಟಿಲ್ಲ.