ಕರಾಚಿ: ಪಾಕಿಸ್ತಾನದ ಅರ್ಥವ್ಯವಸ್ಥೆ ಹಳ್ಳ ಹಿಡಿದ ಬಳಿಕ ದಿನಬಳಕೆಯ ವಸ್ತುಗಳು ಗಗನಕ್ಕೇರಿದ್ದು, ಸದ್ಯ ಪಾಕಿಸ್ತಾನದ ಪ್ರಮುಖ ನಗರ ಕರಾಚಿಯಲ್ಲಿ ಕೆಜಿ ಟೊಮೆಟೊ ಬೆಲೆ ಬಲು ತುಟ್ಟಿಯಾಗಿದೆ.
ಸೋಮವಾರದಂದು ₹300ರಿಂದ ₹320 ಬೆಲೆಗೆ ಮಾರಾಟವಾದ ಕೆಜಿ ಟೊಮೆಟೊ, ಬುಧವಾರದಂದು ದಾಖಲೆಯ ₹400 ಬೆಲೆ ಮಾರಾಟವಾಗಿದೆ. ಈ ಮೂಲಕ ಗ್ರಾಹಕರಿಗೆ ದರದ ಬಿಸಿ ಬಲವಾಗಿ ತಟ್ಟಿದೆ.
ಬೇಡಿಕೆಯ 4,500 ಟನ್ನಲ್ಲಿ ಕೇವಲ 989 ಟನ್ ಟೊಮೆಟೊ ಮಾತ್ರವೇ ಪಾಕಿಸ್ತಾನಕ್ಕೆ ಬಂದಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.