ಶಾಂಘೈ: ಚೀನಾದ ತೆಕ್ಕೆಯಲ್ಲಿದ್ದರೂ ಹಾಂಕಾಂಗ್ ತಾನು ಪ್ರತ್ಯೇಕ ದೇಶ ಎಂದು ವಾದಿಸುತ್ತಲೇ ಬಂದಿದೆ. ಹಾಂಕಾಂಗ್-ಚೀನಾ ನಡುವಿನ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ರಾಜಕೀಯ, ಕಾನೂನು ವಿಷಯದಲ್ಲಿ ಸ್ವಾಯತ್ತತೆ ಹೊಂದಿರುವ ಹಾಂಕಾಂಗ್ ಕೈಗೊಂಡಿರುವ ಹೊಸ ವಿಧೇಯಕದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.
ಭಾನುವಾರ ನಡೆದ ಪ್ರತಿಭಟನೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಶಾಂಘೈ ನಗರದ ಬೀದಿಗಿಳಿದು ಹೋರಾಟ ನಡೆಸಿದರು. ಇದೇ ವೇಳೆ ಪ್ರತಿಭಟನೆ ಹತ್ತಿಕ್ಕಲು ಪೊಲೀಸರೂ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಂಧಿತ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಗೆ ಹಸ್ತಾಂತರಿಸಬೇಕೆಂಬ ಹೊಸ ವಿಧೇಯಕ ಜಾರಿಗೊಳಿಸಿದ್ದನ್ನು ವಿರೋಧಿಸಿ ಜನ ಹೋರಾಟಕ್ಕಿಳಿದಿದ್ದಾರೆ. ಈ ಹೊಸ ವಿಧೇಯಕದಿಂದ ಹಾಂಕಾಂಗ್ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಈ ಒತ್ತಾಯಕ್ಕೆ ಮಣಿದಿರುವ ಚೀನಾ ವಿಧೇಯಕವನ್ನು ಕೈಬಿಟ್ಟಿದೆ.