ETV Bharat / international

ತಾಲಿಬಾನ್​ ಕ್ರೌರ್ಯ: ಕುಟುಂಬಸ್ಥರ ಮುಂದೆಯೇ ಗರ್ಭಿಣಿ ಬರ್ಬರ ಹತ್ಯೆ

ಅಫ್ಘಾನಿಸ್ತಾನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಪೊಲೀಸ್ ಅಧಿಕಾರಿಯಾಗಿದ್ದ ಗರ್ಭಿಣಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

author img

By

Published : Sep 6, 2021, 7:25 AM IST

ಗರ್ಭಿಣಿಯ ಬರ್ಬರ ಹತ್ಯೆ
ಗರ್ಭಿಣಿಯ ಬರ್ಬರ ಹತ್ಯೆ

ಕಾಬೂಲ್​ (ಅಫ್ಘಾನಿಸ್ತಾನ): ಆಫ್ಘನ್​ನಲ್ಲಿ ತಾಲಿಬಾನಿಗಳ ಕ್ರೌರ್ಯ ಮುಂದುವರಿಯುತ್ತಲೇ ಇದೆ. 8 ತಿಂಗಳ ಗರ್ಭಿಣಿ, ಮಹಿಳಾ ಪೊಲೀಸ್​ ಅನ್ನು ಕುಟುಂಬಸ್ಥರ ಮುಂದೆಯೇ ಉಗ್ರರು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಮೃತಳನ್ನು ಬಾನು ನೆಗರ್​ ಎಂದು ಗುರುತಿಸಲಾಗಿದೆ.

ಘೋರ್​ ಪ್ರಾಂತ್ಯದ ರಾಜಧಾನಿ ಫಿರೋಜ್ಕೋಹ್​ನ ಮನೆಯಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ನೆಗರ್​ ಅವರನ್ನು ಪತಿ ಹಾಗೂ ಮಕ್ಕಳ ಮುಂದೆಯೇ ಅಮಾನುಷವಾಗಿ, ವಿಕಾರಗೊಳಿಸಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಏಕಾಏಕಿ ಮನೆಗೆ ನುಗ್ಗಿದ ಮೂವರು ಬಂದೂಕುಧಾರಿಗಳು ಮನೆಯಲ್ಲಿದ್ದವರನ್ನೆಲ್ಲಾ ಕಟ್ಟಿಹಾಕಿ, ಆಕೆಯನ್ನು ಗುಂಡು ಹಾರಿಸಿ ಕೊಲೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್​, ಈ ಹತ್ಯೆಗೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದಿದೆ.

ಇದನ್ನೂ ಓದಿ: ಪಂಜ್​ಶೀರ್​ನ ಎಲ್ಲಾ ಜಿಲ್ಲೆಗಳು ನಮ್ಮ ವಶಕ್ಕೆ ಎಂದ ತಾಲಿಬಾನ್​: ರೆಸಿಸ್ಟೆನ್ಸ್​​ ಫ್ರಂಟ್ ನಿರಾಕರಣೆ

ಆಫ್ಘನ್​ಅನ್ನು ತಾಲಿಬಾನ್​ ತೆಕ್ಕೆಗೆ ಪಡೆದ ನಂತರ ಹಿಂಸಾಚಾರ ಪ್ರಕರಣಗಳು ಮಿತಿ ಮೀರುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿದ್ದು, ಮಕ್ಕಳು, ಗರ್ಭಿಣಿಯರೆನ್ನದೇ ಎಲ್ಲರಿಗೂ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ವರದಿಗಳಾಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.