ETV Bharat / international

ತೀವ್ರ ಹಣಕಾಸಿನ ಮುಗ್ಗಟ್ಟಿನ ನಡುವೆ ರಾಡಾರ್​ ಖರೀದಿಸಿದ ತಾಲಿಬಾನ್

ಅಫ್ಘಾನಿಸ್ತಾನಕ್ಕೆ ಒಪ್ಪಂದವೊಂದರ ಪ್ರಕಾರ ಮೂರು ರಾಡಾರ್​ಗಳನ್ನು ಫ್ರಾನ್ಸ್​ ಪೂರೈಸಿದ್ದು, ಅವುಗಳನ್ನು ಕಾಬೂಲ್ ಸೇರಿದಂತೆ ಮೂರು ನಗರಗಳಲ್ಲಿ ಅಳವಡಿಸಲು ತಾಲಿಬಾನ್ ಮುಂದಾಗಿದೆ.

Taliban get three French Radars to be placed in three provinces
ತೀವ್ರ ಹಣಕಾಸಿನ ಮುಗ್ಗಟ್ಟಿನ ನಡುವೆ ರಾಡಾರ್​ ಖರೀದಿಸಿದ ತಾಲಿಬಾನ್
author img

By

Published : Dec 26, 2021, 9:02 PM IST

ಕಾಬೂಲ್(ಅಫ್ಘಾನಿಸ್ತಾನ) : ತೀವ್ರ ಹಣಕಾಸು ಮುಗ್ಗಟ್ಟು, ಮೂಲಸೌರ್ಕಗಳ ಕೊರತೆಯನ್ನು ಎದುರಿಸಿದ್ದರೂ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಭದ್ರತೆಯ ಕಡೆಗೆ ಗಮನ ಹರಿಸುತ್ತಿದ್ದಂತೆ ಕಾಣುತ್ತಿದೆ. ಭಾನುವಾರ ಫ್ರಾನ್ಸ್​ ನಿರ್ಮಿತ ರಾಡಾರ್​ಗಳು ಅಫ್ಘಾನಿಸ್ತಾನಕ್ಕೆ ಬಂದಿದ್ದು, ಅವುಗಳನ್ನು ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಫ್ರಾನ್ಸ್​ನಿಂದ ಬಂದ ಮೂರು ರಾಡಾರ್​ಗಳನ್ನು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್, ಬಾಲ್ಖ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಇರಿಸಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮವಾದ ಖಾಮಾ ಪ್ರೆಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ರಾಡಾರ್​ಗಳು ಆಗಮಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಫ್ರಾನ್ಸ್​ ಕಂಪನಿಯಾದ ಥೇಲ್ಸ್​ನೊಂದಿಗೆ 112 ಮಿಲಿಯನ್ ಯೂರೋ ಒಪ್ಪಂದವನ್ನು ಅಫ್ಘಾನಿಸ್ತಾನ ಮಾಡಿಕೊಂಡಿತ್ತು.

ಒಪ್ಪಂದದ ಪ್ರಕಾರ ಇನ್ನೂ ಹಲವು ರಾಡಾರ್​ಗಳು ಅಫ್ಘಾನಿಸ್ತಾನಕ್ಕೆ ಬರಬೇಕಿದ್ದು, 2023ರ ವೇಳೆಗೆ ಉಳಿದ ರಾಡಾರ್​ಗಳು ಬರಲಿವೆ ಎಂದು ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ, ಖಾಮಾ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: James Webb Telescope: ಉಡಾವಣೆಯಾದ ಜೇಮ್ಸ್​ ವೆಬ್: ಜಗತ್ತಿನ ಮತ್ತಷ್ಟು ಕೌತುಕ ಬಿಚ್ಚಿಡುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.