ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವವನ್ನು ತಮ್ಮ ಕೈವಶ ಮಾಡಿಕೊಂಡ ಬಳಿಕ ತಾಲಿಬಾನ್ ಉಗ್ರರು ವಿಕೃತ ಖುಷಿಯಲ್ಲಿದ್ದು, ಅಮ್ಯೂಸ್ಮೆಂಟ್ ಪಾರ್ಕ್(ಮನರಂಜನಾ ಉದ್ಯಾನ) ಅನ್ನು ಸುಟ್ಟು ಭಸ್ಮ ಮಾಡಿರುವ ವಿಡಿಯೋ ದೊರೆತಿದೆ.
ಅಫ್ಘಾನ್ ಅಧ್ಯಕ್ಷರ ಕಚೇರಿ ಸೇರಿದಂತೆ ಎಲ್ಲ ಐಷಾರಾಮಿ ಸ್ಥಳಗಳಲ್ಲಿ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ಶೆಬರ್‌ಘನ್‌ನ ಬೊಖ್ದಿ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿದ್ದ ಪ್ರತಿಮೆಗಳು ಸೇರಿದಂತೆ ಇಡೀ ಪಾರ್ಕ್ ಅನ್ನೇ ರಾತ್ರಿ ವೇಳೆ ಸುಟ್ಟು ಹಾಕಿದರು. ಇದು ತಾಲಿಬಾನಿಗಳ ಕ್ರೂರ ಕೃತ್ಯವನ್ನು ತೋರಿಸುತ್ತಿದೆ. ಈ ವಿಡಿಯೋವನ್ನು ಟ್ವಿಟರ್ ಹಂಚಿಕೊಳ್ಳಲಾಗಿದೆ.
-
The Bokhdi Amusement Park was set on fire by Taliban insurgents in Begha, Sheberghan. The reason is that the statues/idols standing there are in Public access Idols are illegal in Islam, This is the logic of the Taliban's brutal emirate. The homeland is occupied.#Afghanistan pic.twitter.com/MBuYsQQbxk
— Ihtesham Afghan (@IhteshamAfghan) August 17, 2021 " class="align-text-top noRightClick twitterSection" data="
">The Bokhdi Amusement Park was set on fire by Taliban insurgents in Begha, Sheberghan. The reason is that the statues/idols standing there are in Public access Idols are illegal in Islam, This is the logic of the Taliban's brutal emirate. The homeland is occupied.#Afghanistan pic.twitter.com/MBuYsQQbxk
— Ihtesham Afghan (@IhteshamAfghan) August 17, 2021The Bokhdi Amusement Park was set on fire by Taliban insurgents in Begha, Sheberghan. The reason is that the statues/idols standing there are in Public access Idols are illegal in Islam, This is the logic of the Taliban's brutal emirate. The homeland is occupied.#Afghanistan pic.twitter.com/MBuYsQQbxk
— Ihtesham Afghan (@IhteshamAfghan) August 17, 2021
ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿದ್ದ ಮಕ್ಕಳು ಆಟಿಕೆ ಕಾರುಗಳಲ್ಲಿ ಆಟವಾಡುತ್ತಿರುವ, ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನೊಂದೆಡೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸಲು ಮುಂದಾಗಿರುವುದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಹೇಗಾದರೂ ಮಾಡಿ ದೇಶಬಿಟ್ಟು ಬೇರೆದೇಶಕ್ಕೆ ಹೋಗಬೇಕೆಂದು ಹಾತೊರೆಯುತ್ತಿದ್ದಾರೆ. ಸದ್ಯ ಎಲ್ಲ ಭರವಸೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಅಫ್ಘಾನ್ ಜನತೆ ಸಹಾಯಕ್ಕಾಗಿ ಎದುರು ನೊಡುತ್ತಿದ್ದಾರೆ.