ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರಕ್ಕೆ ಪಾಕ್ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಆರೋಪಕ್ಕೆ ಪ್ರಧಾನಿ ಇಮ್ರಾನ್ಖಾನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾಲಿಬಾನ್ ಎಂದು ಗುರುತಿಸಲಾಗಿರುವವರಲ್ಲಿ ಹೆಚ್ಚಿನವರು ಜನಸಾಮಾನ್ಯರು. ಗಡಿಯಲ್ಲಿ ಮೂರು ಮಿಲಿಯನ್ ಆಫ್ಘನ್ ನಿರಾಶ್ರಿತರಿದ್ದಾರೆ ಅವರನ್ನು ಹೇಗೆ ಕೊಲ್ಲೋಕೆ ಸಾಧ್ಯ ಎಂದು ಪ್ರಧಾನಿ ಇಮ್ರಾನ್ಖಾನ್ ಪ್ರಶ್ನಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಖಾನ್, ಪಾಕಿಸ್ತಾನವು 30 ಲಕ್ಷ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಅದರಲ್ಲಿ ಹೆಚ್ಚಿನವರು ಪಶ್ತೂನ್ ಹಾಗೂ ತಾಲಿಬಾನ್ ಹೋರಾಟಗಾರರ ಜನಾಂಗದವರೇ ಆಗಿದ್ದಾರೆ. ಸದ್ಯ 5 ಲಕ್ಷ ಶಿಬಿರಗಳಿದ್ದು, ಅವುಗಳಲ್ಲಿ ಕೆಲವು ಉಗ್ರ ಸಂಘಟನೆಗೆ ಸೇರಿದವರಾಗಿಲ್ಲ. ಜನಸಾಮಾನ್ಯರೂ ಇದ್ದಾರೆ. ಅವರನ್ನು ನಾವು ಹೇಗೆ ಹತ್ಯೆಗೈಯ್ಯುವುದಕ್ಕೆ ಸಾಧ್ಯ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದಲ್ಲಿ ತಾಲಿಬಾನ್ ಸುರಕ್ಷಿತ ತಾಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸುರಕ್ಷಿತ ತಾಣಗಳು ಎಲ್ಲಿವೆ? ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ, ಅವರು ತಾಲಿಬಾನ್‌ನಂತೆಯೇ ಒಂದೇ ಜನಾಂಗದವರಾಗಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್‌ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ, ಆದರೆ, ಇಮ್ರಾನ್ ಖಾನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೊಂದು ಅನ್ಯಾಯದ ಆರೋಪ ಎಂದಿದ್ದಾರೆ.
ಇದನ್ನೂ ಓದಿ: ಕರಾಚಿಯಲ್ಲಿ ಚೀನಿ ಪ್ರಜೆಗಳಿದ್ದ ಕಾರಿನ ಮೇಲೆ ಗುಂಡಿನ ದಾಳಿ; ಓರ್ವನಿಗೆ ಗಾಯ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಾರ, ತೆಹ್ರೀಕ್ - ಇ- ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಸುಮಾರು 6,000 ಭಯೋತ್ಪಾದಕರು ಆಫ್ಘನ್ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿಟಿಪಿ ವಿಶಿಷ್ಟ ಪಾಕಿಸ್ತಾನ ವಿರೋಧಿ ಉದ್ದೇಶಗಳನ್ನು ಹೊಂದಿದ್ದಾರೆ. ಇದೇ ರೀತಿ ಆಫ್ಘನ್ ಪಡೆಗಳ ವಿರುದ್ಧ ಅಫ್ಘಾನಿಸ್ತಾನದೊಳಗಿನ ತಾಲಿಬಾನ್ ಉಗ್ರರನ್ನು ಸಹ ಈ ಟಿಟಿಪಿ ಬೆಂಬಲಿಸುತ್ತದೆ ಎಂದು ಯುಎನ್ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ ವರದಿ ತಿಳಿಸಿದೆ.