ETV Bharat / international

ತಾಲಿಬಾನ್ ಸರ್ಕಾರದ ಹಣಕಾಸು ಇಲಾಖೆ ಉಪ ಸಚಿವರಾಗಿ ಅಬ್ದುಲ್ ಲತೀಫ್ ಅಬ್ದುಲ್ ನೇಮಕ - ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೆಬ್ತುಲ್ಲಾ ಅಖುಂದ್‌ಜಾದಾ

ಅಬ್ದುಲ್ ಲತೀಫ್ ನಜಾರಿ ಅವರು ಹಜಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮುಜಾಹಿದ್​ ಟ್ವೀಟ್​ ಮಾಡಿದ್ದಾರೆ. ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ತಾಲಿಬಾನ್​ ಉಗ್ರ ಸಂಘಟನೆ ನೂತನ ಸರ್ಕಾರವನ್ನು ರಚಿಸಿದೆ..

Abdul Latif Nazari
ಅಬ್ದುಲ್ ಲತೀಫ್ ಅಬ್ದುಲ್
author img

By

Published : Dec 26, 2021, 3:40 PM IST

ಕಾಬೂಲ್ : ಆಫ್ಘಾನಿಸ್ತಾನದ ತಾಲಿಬಾನ್​ ಸರ್ಕಾರವು ಹಣಕಾಸು ಇಲಾಖೆಯ ಉಪ ಸಚಿವರಾಗಿ ಅಬ್ದುಲ್ ಲತೀಫ್ ನಜಾರಿ ಅವರನ್ನು ನೇಮಕ ಮಾಡಿದೆ. ಪಿಹೆಚ್​​ಡಿ ಪಡೆದಿರುವ ಡಾ.ಅಬ್ದುಲ್ ಲತೀಫ್ ಅವರು ಪ್ರಸ್ತುತ ಕಾಬೂಲ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೆಬ್ತುಲ್ಲಾ ಅಖುಂದ್‌ಜಾದಾ ಅವರ ಆದೇಶದ ಮೇರೆಗೆ ಅಬ್ದುಲ್ ಲತೀಫ್ ನಜಾರಿ ಅವರನ್ನು ಹಣಕಾಸು ಇಲಾಖೆಯ ಉಪ ಸಚಿವರಾಗಿ ನೇಮಿಸಲಾಗಿದೆ.

ಈ ವಿಚಾರವನ್ನು ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಉಪ ಸಚಿವ ಮತ್ತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವೀಟ್​ ಮಾಡಿ ತಿಳಿಸಿದ್ದಾರೆ ಎಂದು ಆಫ್ಘಾನಿಸ್ತಾನದ ಖಾಮಾ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಬ್ರಿಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

ಅಬ್ದುಲ್ ಲತೀಫ್ ನಜಾರಿ ಅವರು ಹಜಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮುಜಾಹಿದ್​ ಟ್ವೀಟ್​ ಮಾಡಿದ್ದಾರೆ. ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ತಾಲಿಬಾನ್​ ಉಗ್ರ ಸಂಘಟನೆ ನೂತನ ಸರ್ಕಾರವನ್ನು ರಚಿಸಿದೆ.

ಈವರೆಗೆ 33 ಸದಸ್ಯರನ್ನು ಮಧ್ಯಂತರ ಸಂಪುಟಕ್ಕೆ ಸೇರಿಸಿಕೊಂಡಿದೆ. ಈ ಪೈಕಿ ಹಂಗಾಮಿ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್​​​ ಸೇರಿದಂತೆ 14 ಮಂದಿಯ ಹೆಸರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಭಯೋತ್ಪಾದಕರ ಪಟ್ಟಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.