ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಗಾರರು ಮಹಿಳಾ ಉದ್ಯೋಗಿಗಳನ್ನು ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ಈಗಾಗಲೇ ನಿರ್ಬಂಧಿಸಿದ್ದಾರೆ. ಅದರಂತೆ ಇದೀಗ ಸಚಿವ ಸ್ಥಾನ ಹಂಚಿಕೆಯಾಗಿದ್ದು, ಪಟ್ಟಿಯಲ್ಲೂ ಪುರುಷರು ಬಿಟ್ಟರೆ ಮಹಿಳೆಯರ ಹೆಸರು ಮಾಯವಾಗಿದೆ.
ಅಷ್ಟೇ ಅಲ್ಲದೆ, ಈ ಪುರುಷ ಪ್ರಧಾನ ಸರ್ಕಾರದಲ್ಲಿ ಉಪ ಮಂತ್ರಿಗಳನ್ನು ಸಹ ನೇಮಕ ಮಾಡಿದೆ. ಕ್ಯಾಬಿನೆಟ್ನಲ್ಲಿ ಮಹಿಳೆಯರಿಗೆ ಸ್ಥಾನ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಬಂದಿದ್ದರೂ ಅದಕ್ಕೆ ಕ್ಯಾರೇ ಎನ್ನದ ತಾಲಿಬಾನ್ ಸರ್ಕಾರ, ಪುರುಷರನ್ನೊಳಗೊಂಡ ಸಚಿವ ಸಂಪುಟ ರಚನೆ ಮಾಡಿದೆ.
ಹೊಸ ಕ್ಯಾಬಿನೆಟ್ ಪಟ್ಟಿಯನ್ನು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಕಾಬೂಲ್ನಲ್ಲಿ ನಡೆದ ಹೊಸ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ್ದಾರೆ.