ತೈಪೆ: ಅಮೆರಿಕ ಪಾಲುದಾರಿಕೆ ಹೊಂದಿರುವ ಜರ್ಮನ್ನ ಬಯೋಎನ್ಟೆಕ್ ಕಂಪನಿಯಿಂದ ತೈವಾನ್, ಕೋವಿಡ್ ವ್ಯಾಕ್ಸಿನ್ ಆಮದು ಮಾಡಿಕೊಂಡಿದೆ. ಈ ಹಿಂದೆ ತೈವಾನ್ ಅಧ್ಯಕ್ಷ ಸಾಯಿ ಇಂಗ್-ವೆನ್, ಚೀನಾ ಫೈಜರ್ ಬಯೋಎನ್ಟೆಕ್ ಲಸಿಕೆ ಖರೀದಿಸುವುದನ್ನು ತಡೆಯುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಚೀನಾ ತಳ್ಳಿ ಹಾಕಿದೆ.
ಎಲ್ಲ ಒಪ್ಪಂದಗಳಿಗೆ ಸಹಿ ಹಾಕಿದ್ದರೂ, ಈವರೆಗೆ ಲಸಿಕೆ ಮಾತ್ರ ಪೂರೈಕೆಯಾಗಿರಲಿಲ್ಲ. ಆದ್ದರಿಂದ, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪ್ ಮತ್ತು ಹೊನ್ ಹೈ ಪ್ರಿಸಿಷಿಯನ್ ಎಲೆಕ್ಟ್ರಾನಿಕ್ಸ್ ಹಾಗೂ ಬೌದ್ಧ ಸಂಸ್ಥೆ ತ್ಸು ಚಿ, ಲಸಿಕೆಗಳನ್ನು ಖರೀದಿಸಿ ತೈವಾನ್ಗೆ ನೀಡಿವೆ. ಮೂರು ಸಂಸ್ಥೆಗಳು ಒಟ್ಟು 15 ಮಿಲಿಯನ್ ಡೋಸ್‌ಗಳನ್ನು ಖರೀದಿಸಿವೆ. ಮೊದಲ ಹಂತದಲ್ಲಿ 9,30,000 ಡೋಸ್‌ಗಳನ್ನು ಹೊತ್ತ ವಿಮಾನವು ಟಾವೊವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದಿದೆ.
ತೈವಾನ್ನಲ್ಲಿ ಫೈಜರ್ ಬಯೋಎನ್ಟೆಕ್ ಲಸಿಕೆ ಬಳಕೆಗೆ ಈವರೆಗೆ ಅನುಮತಿ ನೀಡಿಲ್ಲ. ಆದರೂ, ತೈವಾನ್ ವ್ಯಾಕ್ಸಿನ್ ಡೋಸ್‌ಗಳನ್ನು ಆಮದು ಮಾಡಿಕೊಂಡಿದೆ. ಚೀನಾದ ಕಂಪನಿ ಫೋಸುನ್ ಫಾರ್ಮಾ ಚೀನಾದಲ್ಲಿ ಲಸಿಕೆಯ ವಿತರಣಾ ಹಕ್ಕುಗಳನ್ನು ಹೊಂದಿದೆ.
ಇದನ್ನೂ ಓದಿ: ಚೀನಾ - ನೇಪಾಳ ಗಡಿ ವಿವಾದ: ಸಮಿತಿ ರಚಿಸಿದ ಬಹದ್ದೂರ್ ದೇವು ಬಾ ಸರ್ಕಾರ
ಫೈಜರ್ ಬಯೋಎನ್ಟೆಕ್ ಲಸಿಕೆಯನ್ನು 12 ರಿಂದ 17 ವರ್ಷ ವಯಸ್ಸನವರಿಗೆ ನೀಡಲಾಗುವುದು ಎಂದು ತೈವಾನ್ನ ರೋಗ ನಿಯಂತ್ರಣ ಕೇಂದ್ರಗಳು ತಿಳಿಸಿವೆ. ತೈವಾನ್ ತನ್ನ ಲಸಿಕಾ ಅಭಿಯಾನದಲ್ಲಿ ಇದುವರೆಗೆ ಆಸ್ಟ್ರಾಜೆನೆಕಾ, ಮಾಡರ್ನಾ ಮತ್ತು ದೇಶೀಯವಾಗಿ ತಯಾರಿಸಿದ ಮೆಡಿಜೆನ್ ಲಸಿಕೆಯನ್ನು ಬಳಸುತ್ತಿದೆ. ದೇಶದಲ್ಲಿ ಈವರೆಗೆ ಶೇಕಡಾ 43 ರಷ್ಟು ಜನರಿಗೆ ಮೊದಲ ಡೋಸ್ ನೀಡಿರುವುದಾಗಿ ತೈವಾನ್ ಘೋಷಿಸಿದೆ.