ETV Bharat / international

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಾಯುಪಡೆ ವಿಮಾನ ಪತನ : ತೈವಾನ್​ನಿಂದ ದೃಢ - ದಕ್ಷಿಣ ಚೀನಾ ಸಮುದ್ರದಲ್ಲಿ ವಾಯುಪಡೆ ವಿಮಾನ ಪತನ

ಕೆಲವು ದಿನಗಳ ಹಿಂದೆ ವಿಯೆಟ್ನಾಂ ಕರಾವಳಿಯಲ್ಲಿ ಚೀನಾದ ಮಿಲಿಟರಿ ಗಸ್ತು ವಿಮಾನ ಪತನಗೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವನ್ನು ಚೀನಾ ನಿರಾಕರಿಸಿತ್ತು. ಆದರೆ, ತೈವಾನ್ ಮಾಧ್ಯಮದ ಪ್ರಕಾರ ಅಲ್ಲಿನ ಎನ್​ಎಸ್​ಬಿ ವಿಮಾನ ಪತನವನ್ನು ದೃಢೀಕರಿಸಿದೆ..

Taiwan confirms Chinese military plane crashed into South China Sea
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಾಯುಪಡೆ ವಿಮಾನ ಪತನ: ತೈವಾನ್​ನಿಂದ ದೃಢ
author img

By

Published : Mar 13, 2022, 6:58 AM IST

ತೈಪೈ, ತೈವಾನ್ : ಚೀನಾದ ಮಿಲಿಟರಿ ವಿಮಾನವು ಕೆಲವು ದಿನಗಳ ಹಿಂದೆ ದಕ್ಷಿಣ ಚೀನಾ ಸಮುದ್ರದಲ್ಲಿ ಪತನಗೊಂಡಿದೆ ಎಂದು ತೈವಾನ್‌ನ ರಾಷ್ಟ್ರೀಯ ಭದ್ರತಾ ಬ್ಯೂರೋ (ಎನ್‌ಎಸ್‌ಬಿ) ದೃಢಪಡಿಸಿದೆ ಎಂದು ತೈವಾನ್ ನ್ಯೂಸ್ ಮಾಹಿತಿ ನೀಡಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ಫೋರ್ಸ್ (PLAAF) ವಿಮಾನವು ಮಾರ್ಚ್ 1ರಂದು ದಕ್ಷಿಣ ಚೀನಾ ಸಮುದ್ರದಲ್ಲಿ ಪತನಗೊಂಡಿದೆ ಎಂದು ಮಾರ್ಚ್ 10ರಂದು ಎನ್​ಎಸ್​ಬಿ ಡೈರೆಕ್ಟರ್-ಜನರಲ್ ಚೆನ್ ಮಿಂಗ್-ಟಾಂಗ್ ಅವರು ಮಾಹಿತಿ ನೀಡಿರುವುದಾಗಿ ತೈವಾನ್ ನ್ಯೂಸ್​ನಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ದಿನಗಳ ಹಿಂದೆ ವಿಯೆಟ್ನಾಂ ಕರಾವಳಿಯಲ್ಲಿ ಚೀನಾದ ಮಿಲಿಟರಿ ಗಸ್ತು ವಿಮಾನ ಪತನಗೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವನ್ನು ಚೀನಾ ನಿರಾಕರಿಸಿತ್ತು. ಆದರೆ, ತೈವಾನ್ ಮಾಧ್ಯಮದ ಪ್ರಕಾರ ಅಲ್ಲಿನ ಎನ್​ಎಸ್​ಬಿ ವಿಮಾನ ಪತನವನ್ನು ದೃಢೀಕರಿಸಿದೆ.

ಇದನ್ನೂ ಓದಿ: ಪಾಕ್​ನಲ್ಲಿ ಬಿದ್ದ ಭಾರತದ ಕ್ಷಿಪಣಿ.. ಜಂಟಿ ತನಿಖೆಗೆ ಪಾಕಿಸ್ತಾನ ಒತ್ತಾಯ

ತೈವಾನ್ ಸೊಸೈಟಿ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಶೋಧಕರಾದ ಚಾಂಗ್ ಚಿಂಗ್ ಅವರು ಮಾರ್ಚ್ 7ರಂದು ವಿಮಾನ ಪತನದ ಮಾಧ್ಯಮ ವರದಿಯನ್ನು ಅಸಂಬದ್ಧ ಎಂದು ಟೀಕಿಸಿದ್ದು ಮಾತ್ರವಲ್ಲದೇ, ಒಂದು ವೇಳೆ ವಿಮಾನ ಪತನವಾಗಿದ್ದರೆ, ಚೀನಾ ಅದನ್ನು ಮುಚ್ಚಿಡುತ್ತಿರಲಿಲ್ಲ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.