ETV Bharat / international

ಅಬುಧಾಬಿಯ ಡ್ರೋಣ್‌ ದಾಳಿಯಲ್ಲಿ ಇಬ್ಬರು ಭಾರತೀಯರು, ಓರ್ವ ಪಾಕ್‌ ಪ್ರಜೆ ಸಾವು; ಆರು ಮಂದಿಗೆ ಗಾಯ - Suspected drone attacks cause blast, fire in Abu Dhabi

ಅಬುಧಾಬಿಯ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಎಡಿಎನ್‌ಒಸಿಯ ಸಂಗ್ರಹಣಾ ಸೌಲಭ್ಯದ ಬಳಿ ಮೂರು ಪೆಟ್ರೋಲಿಯಂ ಟ್ಯಾಂಕರ್‌ಗಳು ಸ್ಫೋಟಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

Suspected drone attacks cause blast, fire in Abu Dhabi: police
ಅಬುಧಾಬಿ ವಿಮಾನ ನಿಲ್ದಾಣ ಸಮೀಪ, ಮೂರು ತೈಲ ಟ್ಯಾಂಕರ್‌ಗಳ ಸ್ಫೋಟ; ಡ್ರೋಣ್‌ಗಳಿಂದ ಕೃತ್ಯದ ಶಂಕೆ
author img

By

Published : Jan 17, 2022, 3:50 PM IST

Updated : Jan 17, 2022, 5:03 PM IST

ಯುಎಇ : ಅಬುಧಾಬಿಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಸ್ಫೋಟ ಪ್ರಕರಣಗಳಲ್ಲಿ ಇಬ್ಬರು ಭಾರತೀಯರು, ಓರ್ವ ಪಾಕ್‌ ಪ್ರಜೆ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಬುಧಾಬಿಯ ಎಮಿರೇಟ್‌ನ ಮುಖ್ಯ ವಿಮಾನ ನಿಲ್ದಾಣದ ನಿರ್ಮಾಣ ಹಂತದ ಸ್ಥಳ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಎಡಿಎನ್‌ಒಸಿಯ ಸಂಗ್ರಹಣಾ ಘಟಕದ ಬಳಿ ಮೂರು ಪೆಟ್ರೋಲಿಯಂ ಟ್ಯಾಂಕರ್‌ಗಳು ಸ್ಫೋಟಗೊಂಡಿದ್ದವು. ಡ್ರೋಣ್‌ ಮೂಲಕ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಅಬುಧಾಬಿ ವಿಮಾನ ನಿಲ್ದಾಣ, ತೈಲ ಟ್ಯಾಂಕರ್‌ಗಳ ಸ್ಫೋಟ; ಮೂವರು ಸಾವು, ಆರು ಮಂದಿಗೆ ಗಾಯ

ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಆಗಿರುವ ಬೆಂಕಿ ಅವಘಡ ಸಣ್ಣ ಪ್ರಮಾಣದ್ದಾಗಿದ್ದು, ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗುತ್ತಿರುವ ನಿರ್ಮಾಣ ಹಂತದ ಸ್ಥಳದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಒಡೆತನದ ಎಡಿಎನ್‌ಒಸಿಯ ತೈಲ ಸಂಗ್ರಹದ ಸಮೀಪದಲ್ಲೇ ಮೂರು ತೈಲ ಟ್ಯಾಂಕರ್‌ಗಳನ್ನು ಸ್ಫೋಟಿಸಲಾಗಿದೆ.

ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಸಣ್ಣ ಗಾತ್ರದ ವಸ್ತುವೊಂದು ಸ್ಥಳದಲ್ಲಿ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಇದು ಡ್ರೋಣ್‌ನ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಡ್ರೋಣ್‌ ಎರಡು ಕಡೆ ಬಿದ್ದು ಬೆಂಕಿಯ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಯೆಮೆನ್‌ನ ಹೌತಿ ಬಂಡುಕೋರರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. 2015ರಿಂದಲೂ ಯುಎಇ ಯೆಮೆನ್‌ನೊಂದಿಗೆ ಯುದ್ಧ ಮಾಡುತ್ತಿದೆ. ಹೌತಿ ಸೇನಾ ವಕ್ತಾರ ಯಾಹಿಯಾ ಸರೇಯ್ ಈ ಸಂಬಂಧ ಮಾಹಿತಿ ನೀಡಿದ್ದು, ಯುಎಇಯಲ್ಲಿ ದಾಳಿಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

Last Updated : Jan 17, 2022, 5:03 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.