ETV Bharat / international

ಬೆಳ್ಳಂಬೆಳಗ್ಗೆ ಸಮುದ್ರದ ಆಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಇಲ್ಲ ಎಂದ ಸರ್ಕಾರ

author img

By

Published : Mar 14, 2022, 6:43 AM IST

ಇಂಡೋನೇಷ್ಯಾದಲ್ಲಿ ಸಮುದ್ರದ ಆಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿಯ ಅಪಾಯವಿಲ್ಲ ಎಂದು ಸರ್ಕಾರ ತಿಳಿಸಿದೆ.

Strong undersea quake shakes Indonesia  no tsunami warning from Indonesia government  earthquake in Indonesia  Indonesia earthquake news  ಇಂಡೋನೇಷ್ಯಾದಲ್ಲಿ ಸಮುದ್ರದೊಳಗೆ ಪ್ರಬಲ ಭೂಕಂಪ  ಭೂಕಂಪದಿಂದ ಸುನಾಮಿಯ ಅಪಾಯವಿಲ್ಲ ಎಂದ ಇಂಡೋನೇಷ್ಯಾ ಸರ್ಕಾರ  ಇಂಡೋನೇಷ್ಯಾದಲ್ಲಿ ಭೂಕಂಪ  ಇಂಡೋನೇಷ್ಯಾ ಭೂಕಂಪನ ಸುದ್ದಿ
ಸುನಾಮಿ ಇಲ್ಲ ಎಂದ ಸರ್ಕಾರ

ಜಕಾರ್ತ : ಸೋಮವಾರ ಬೆಳ್ಳಂಬೆಳಗ್ಗೆ ಪಶ್ಚಿಮ ಇಂಡೋನೇಷ್ಯಾದಲ್ಲಿ ಪ್ರಬಲ ಮತ್ತು ಸಮುದ್ರದೊಳಗೆ ಭೂಕಂಪ ಸಂಭವಿಸಿದೆ. ಯಾವುದೇ ಗಂಭೀರ ಹಾನಿ ಬಗ್ಗೆ ವರದಿಯಾಗಿಲ್ಲ ಮತ್ತು ಅಲ್ಲಿನ ಸರ್ಕಾರ ಸುನಾಮಿಯ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಿಕ್ಟರ್​ ಮಾಪಕದಲ್ಲಿ ಭೂಕಂಪನ ತೀವ್ರತೆ 6.6 ದಾಖಲಾಗಿದೆ. ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಪರಿಯಾಮನ್‌ನ ಪಶ್ಚಿಮದ 169 ಕಿಲೋಮೀಟರ್‌ ದೂರದಲ್ಲಿ ಮತ್ತು 16 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ಕೇಂದ್ರ ಬಿಂದು ಇತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಓದಿ: ಪಂದ್ಯದಲ್ಲಿ ಸೋಲು: ಮಕ್ಕಳಿಗೆ ಬೆಲ್ಟ್​, ಚಪ್ಪಲಿಯಿಂದ ಹೊಡೆದ ಕೋಚ್​!

ಪ್ರಾಂತ್ಯದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಆದರೆ, ಸುನಾಮಿಯ ಅಪಾಯವಿಲ್ಲ ಎಂದು ಇಂಡೋನೇಷ್ಯಾದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಇಂಡೋನೇಷ್ಯಾ 271 ಮಿಲಿಯನ್ ಜನಸಂಖ್ಯೆಯ ವಿಶಾಲವಾದ ದ್ವೀಪ ಸಮೂಹವಾಗಿದೆ. ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಂದ ಈ ಸ್ಥಳ ಪ್ರಭಾವಿತವಾಗಿರುತ್ತದೆ.

ಕಳೆದ ತಿಂಗಳು ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದರು ಮತ್ತು 400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಲೇಷ್ಯಾ ಮತ್ತು ಸಿಂಗಾಪುರದವರೆಗೆ ಸಂಭವಿಸಿದ ಕಂಪನದಿಂದ ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ಹಾನಿಗೊಳಗಾಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.