ETV Bharat / international

ಪ್ರಯೋಗಾಲಯದಲ್ಲಿ ಉತ್ಪಾದನೆಯಾಗುತ್ತೆ ಚಿಕನ್: ಮಾಂಸಾಹಾರ ಪ್ರಿಯರಿಗೆ ಗುಡ್​​ನ್ಯೂಸ್..! - Lab-grown meat

ಮಾಂಸಾಹಾರ ಪ್ರಿಯರಿಗೆ ಸಿಂಗಾಪುರ ಸಿಹಿ ಸುದ್ದಿ ನೀಡಿದ್ದು, ಪ್ರಯೋಗಾಲಯದಲ್ಲಿ ಉತ್ಪಾದನೆಯಾದ ಚಿಕನ್ ಸಂಶೋಧನೆ ಮಾಡಿದೆ.

representational image
ಪ್ರಾತಿನಿಧಿಕ ಚಿತ್ರ
author img

By

Published : Dec 2, 2020, 3:47 PM IST

ಸಿಂಗಾಪುರ್ : ಪ್ರಯೋಗಾಲಯದಲ್ಲಿ ಚಿಕನ್ ಉತ್ಪಾದನೆ ಮಾಡುವುದರಲ್ಲಿ ಸಿಂಗಾಪುರ್​ ಯಶಸ್ವಿಯಾಗಿದ್ದು, ರಾಷ್ಟ್ರೀಯ ಆಹಾರ ಸಂಸ್ಥೆ ಆ ಕೋಳಿ ಮಾಂಸ ಸೇವನೆ ಸುರಕ್ಷಿತವಾಗಿದೆ ಎಂದು ಅನುಮೋದನೆ ನೀಡಿದೆ ಎಂದು ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ.

ಪ್ರಾಣಿ ಬಲಿಯಿಂದ ಅಲ್ಲದೇ ನೈಸರ್ಗಿಕ ಪ್ರಕ್ರಿಯೆ ಮೂಲಕ ಕೋಶಗಳನ್ನು ಉತ್ಪಾದಿಸುವ ವಿಧಾನದಲ್ಲಿ ಚಿಕನ್ ಉತ್ಪಾದನೆ ಮಾಡಲಾಗುತ್ತದೆ. ಕ್ಯಾಲಿಫೋರ್ನಿಯಾದ ಫುಡ್ ಸ್ಟಾರ್ಟ್​ ಅಪ್​ ಆದ ಈಟ್ ಜಸ್ಟ್​ ಮೊದಲ ಬಾರಿಗೆ ಈ ರೀತಿಯ ಆಹಾರಕ್ಕೆ ಒಪ್ಪಿಗೆ ನೀಡಿದೆ.

ಪ್ರಯೋಗಾಲಯದಲ್ಲಿ ಉತ್ಪಾದನೆಯಾದ ನೈಸರ್ಗಿಕ ಚಿಕನ್ ಅನ್ನು ಸಿಂಗಾಪುರ್​ನಲ್ಲಿಯೇ ಉತ್ಪಾದನೆ ಮಾಡಲಾಗುತ್ತದೆ ಎಂದು ಈಟ್ ಜಸ್ಟ್​ನ ಸಿಇಒ ಜೋಶ್ ಟೆಕ್ರಿಕ್ ಸ್ಟ್ರೇಟ್ ಟೈಮ್ಸ್ ನೀಡಿದ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕೆಲವೇ ದಿನಗಳಲ್ಲಿ ಈ ಮಾಂಸವನ್ನು ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತದೆ. ಆ ದಿನಗಳು ತುಂಬಾ ಹತ್ತಿರವಾಗುತ್ತಿವೆ ಎಂದು ಜೋಶ್ ಟೆಕ್ರಿಕ್ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಸಾಮಾನ್ಯ ಕೋಳಿ ಮಾಂಸಕ್ಕಿಂತ ಬೆಲೆ ಅಧಿಕವಾಗಿರಲಿದ್ದು, ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಕಡಿಮೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.