ಲಾಹೋರ್ : ದೇಶದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಪಿಸಿದರು. ವಿಪಕ್ಷಗಳ ಒಕ್ಕೂಟ ಪಾಕಿಸ್ತಾನ್ ಡೆಮಾಕ್ರಾಟಿಕ್ ಅಲಯನ್ಸ್ (ಪಿಡಿಎಂ) ವತಿಯಿಂದ ಲಾಹೋರ್‌ನಲ್ಲಿ ನಡೆದ ಸರ್ಕಾರದ ವಿರುದ್ಧದ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆ ನಗರದಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ. ಆದರೂ ನಗರದ ಮಿನಾರ್-ಎ- ಪಾಕಿಸ್ತಾನ್ ಬಳಿ ವಿಪಕ್ಷಗಳ ಒಕ್ಕೂಟ ಶಕ್ತಿ ಪ್ರದರ್ಶನ ಸಮಾವೇಶ ನಡೆಸಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಕಳೆದ ಒಂದು ವರ್ಷದಿಂದ ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಜ್ ಷರೀಫ್, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಇದನ್ನೂ ಓದಿ : ಭಯೋತ್ಪಾದಕ ಪಟ್ಟಿಯಿಂದ ಸುಡಾನ್ ತೆಗೆದುಹಾಕಲು ಯುಎಸ್ ಒಪ್ಪಿಗೆ
ಇಮ್ರಾನ್ ಖಾನ್ ದೇಶವನ್ನು ಹಣದುಬ್ಬರ ಮತ್ತು ನಿರೋದ್ಯೋಗ ಸಮಸ್ಯೆಗೆ ತಳ್ಳಿದ್ದಾರೆ. ದೇಶದಲ್ಲಿ ಗೋದಿ ಮತ್ತು ಸಕ್ಕರೆ ಸಮಸ್ಯೆ ಇದ್ದರೂ, ಖಾನ್ ಬೆಂಬಲಿಗರು ಹಣ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಉಚ್ಚಾಟಿತ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.