ಬ್ಯಾಂಕಾಕ್: ಥಾಯ್ಲೆಂಡ್ನ ಈಶಾನ್ಯ ನಗರ ಕೊರತ್‌ನ (ನಖೋನ್ ರಾಟ್ಚಸಿಮಾ) ಶಾಪಿಂಗ್ ಮಾಲ್ನಲ್ಲಿ ಶನಿವಾರ ಗುಂಡಿನ ದಾಳಿ ನಡೆಸಿ 27 ಮಂದಿಯನ್ನು ಬಲಿ ಪಡೆದ ಯೋಧನನ್ನು ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸಾರ್ಜೆಂಟ್-ಮೇಜರ್ ಜಕ್ರಪಂತ್ ಥೊಮ್ಮ ಎಂಬ ಯೋಧ ನಿನ್ನೆ ಗುಂಡಿನ ದಾಳಿ ನಡೆಸಿ 27 ಜನರ ಸಾಮೂಹಿಕ ಕೊಲೆ ಮಾಡಿದ್ದಲ್ಲದೆ, ಇದನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ. ಕೈಯಲ್ಲಿ ಗನ್ ಹಿಡಿದುಕೊಂಡಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ, 'ನಾನು ಶರಣಾಗಬೇಕೇ? ಯಾರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದನು. ಘಟನೆಯಲ್ಲಿ ಸ್ಥಳದಲ್ಲೇ 17 ಮಂದಿ ಸಾವನಪ್ಪಿದ್ದು, ಉಳಿದವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ, ಹಿಂದೆಂದೂ ಕಂಡಿರದ ಈ ದಾಳಿಯಲ್ಲಿ 27 ಮಂದಿ ಬಲಿ ಆಗಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದ ಗನ್ಮ್ಯಾನ್ ಈ ಕೃತ್ಯ ಎಸಗಿದ್ದಾನೆ. ಈ ರೀತಿಯ ದಾಳಿ ನಡೆಯಬಾರದು, ಇದೇ ಕೊನೆಯದಾಗಬೇಕೆಂದು ಎಂದು ಹೇಳಿದ್ದಾರೆ.