ETV Bharat / international

ಬೆಂಕಿ ಹಚ್ಚಿಕೊಂಡು ರಷ್ಯಾ ಪತ್ರಕರ್ತೆ ಆತ್ಮಹತ್ಯೆ

ಪತ್ರಕರ್ತೆ ಸ್ಲವಿನಾ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಅಧಿಕೃತ ಮಾಹಿತಿ ಇಲ್ಲ. ಆದರೆ, ತನ್ನ ಸಾವಿಗೆ ರಷ್ಯಾದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ ಎಂದು ಸ್ವತಂತ್ರ ಸುದ್ದಿತಾಣವಾದ ಮೆಡುಜಾ ವರದಿ ಮಾಡಿದೆ.

Russia
ಪತ್ರೆಕರ್ತೆ ಆತ್ಮಹತ್ಯೆ
author img

By

Published : Oct 3, 2020, 8:12 PM IST

ಮಾಸ್ಕೋ: ರಷ್ಯಾದ ಸುದ್ದಿ ವೆಬ್‌ಸೈಟ್‌ವೊಂದರ ಸಂಪಾದಕಿಯೊಬ್ಬಳು ಇಲ್ಲಿನ ಪ್ರಾದೇಶಿಕ ಪೊಲೀಸ್ ಪ್ರಧಾನ ಕಚೇರಿಯ ಹೊರಗಡೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಾಸ್ಕೋ ನಗರದ ಪೂರ್ವಕ್ಕೆ ಸುಮಾರು 380 ಕಿಲೋಮೀಟರ್ ದೂರದ ನಿಝ್ನೀ ನವ್ಗೊರೊಡ್ ನಗರದಲ್ಲಿರುವ 'ಕೋಝಾ ಪ್ರೆಸ್' ಸಂಪಾದಕಿಯಾಗಿರುವ ಐರಿನಾ ಸ್ಲವಿನಾ ಸಾವನ್ನಪ್ಪಿರುವುದಾಗಿ ರಷ್ಯಾ ತನಿಖಾ ಸಮಿತಿ ದೃಢಪಡಿಸಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಅಧಿಕಾರಿಗಳು ಆಕೆಯ ನಿವಾಸವನ್ನು ಹುಡುಕುತ್ತಿದ್ದರು. ಇದಾದ ಒಂದು ದಿನದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತನ್ನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಸ್ಲವಿನಾ ಗುರುವಾರ ವರದಿ ಮಾಡಿದ್ದರು. ಆದರೆ ಯಾವ ಉದ್ದೇಶಕ್ಕಾಗಿ ಶೋಧ ನಡೆಸಿದ್ದರು ಎಂಬುದು ಸ್ಪಷ್ಟವಿಲ್ಲ.

ಇದನ್ನೂ ಓದಿ: ಅತ್ಯಾಚಾರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪಾಕ್​ ವಾಹಿನಿಗಳಿಗೆ ನಿರ್ಬಂಧ

ಸ್ಲವಿನಾ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಅಧಿಕೃತ ಮಾಹಿತಿ ಇಲ್ಲ. ಆದರೆ, ತನ್ನ ಸಾವಿಗೆ ರಷ್ಯಾದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ ಎಂದು ಸ್ವತಂತ್ರ ಸುದ್ದಿತಾಣವಾದ ಮೆಡುಜಾ ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.