ETV Bharat / international

ಮತ್ತೊಂದು ಕೋವಿಡ್-19 ಲಸಿಕೆಗೆ ರಷ್ಯಾ ಅನುಮೋದನೆ - ಎಪಿವಾಕ್‌ ಕೊರೊನಾ ಲಸಿಕೆ

ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಅಂಡ್ ಬಯೋಟೆಕ್ನಾಲಜಿ ರಷ್ಯಾದ ಎರಡನೇ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

Russia approves another Covid-19 vaccine
ಕೋವಿಡ್-19 ಲಸಿಕೆಗೆ ರಷ್ಯಾ ಅನುಮೋದನೆ
author img

By

Published : Oct 14, 2020, 11:31 PM IST

ಮಾಸ್ಕೋ: ರಷ್ಯಾ ಎರಡನೇ ಕೋವಿಡ್ -19 ಲಸಿಕೆಯನ್ನು ನೋಂದಾಯಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ದೊಡ್ಡ ಪ್ರಮಾಣದ ಕ್ಲಿನಿಕಲ್ ಪ್ರಯೋಗಕ್ಕೆ ಮುಂಚಿತವಾಗಿ ಸ್ಪುಟ್ನಿಕ್ ವಿ ಅಧಿಕೃತವಾಗಿ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿದದ ನಂತರ ಲಸಿಕೆಯೊಂದಕ್ಕೆ ಅನುಮೋದನೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ಇದು ವೈಜ್ಞಾನಿಕ ಸಮುದಾಯದಲ್ಲಿ ಕೆಲವು ಭಾಗಗಳಿಂದ ಟೀಕೆಗಳನ್ನು ಎದುರಿಸಿತು.

"ಎಪಿವಾಕ್‌ಕೊರೊನಾ" ಎಂದು ಕರೆಯಲ್ಪಡುವ ವೆಕ್ಟರ್‌ನ ಲಸಿಕೆ, SARS-CoV-2 ಪ್ರೋಟೀನ್‌ಗಳ ರಾಸಾಯನಿಕವಾಗಿ ಸಂಶ್ಲೇಷಿತ ಪೆಪ್ಟೈಡ್ ಪ್ರತಿಜನಕಗಳನ್ನು ಅವಲಂಬಿಸಿದೆ ಎಂದು ಕ್ಲಿನಿಕಲ್ ಟ್ರಯಲ್ಸ್​ನಲ್ಲಿನ ವರದಿಯಲ್ಲಿ ಹೇಳಲಾಗಿದೆ.

ರಷ್ಯಾದ ಉಪಪ್ರಧಾನಿ ಟಟ್​ಯಾನ ಗೋಲಿಕೋವಾ ಅವರು ಎಪಿವಾಕ್ ಕೊರೊನಾ ಲಸಿಕೆಯನ್ನು ಸ್ವತಃ ಪರೀಕ್ಷಿಸಿದ್ದಾರೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಲಿಲ್ಲ ಎಂದು ವರದಿ ತಿಳಿಸಿದೆ.

"ವೆಕ್ಟರ್ ಕೇಂದ್ರವು ರಷ್ಯಾದ ವಿವಿಧ ಪ್ರದೇಶಗಳಲ್ಲಿ ನೋಂದಣಿ ನಂತರದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುತ್ತಿದೆ, ಇದರಲ್ಲಿ 40,000 ಸ್ವಯಂಸೇವಕರು ಸೇರಿದ್ದಾರೆ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.