ETV Bharat / international

ಗಡ್ಡ ತೆಗಿಯಂಗಿಲ್ಲ, ಒಂಟಿಯಾಗಿ ಮಹಿಳೆ ಓಡಾಡಂಗಿಲ್ಲ, ಭಯೋತ್ಪಾದಕರಿಗೂ ಧೂಮಪಾನ ವರ್ಜಿತ: ಇದು ತಾಲಿಬಾನ್ ಕಾನೂನು! - ತಾಲಿಬಾನ್​ನಿಂದ ಹೊಸ ಕಾನೂನುಗಳ ಜಾರಿ

ಅಫ್ಘಾನಿಸ್ತಾನದ ಶೇಕಡಾ 85ರಷ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಮುಖ್ಯಸ್ಥ ಸ್ಪಷ್ಟನೆ ನೀಡಿದ್ದು, ಈ ಪ್ರದೇಶಗಳಲ್ಲಿ ಷರಿಯತ್ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.

rules imposed by Taliban after taking over parts of Afghanistan
ತಾಲಿಬಾನ್ ಆಕ್ರಮಿತ ಆಫ್ಘನ್ ಪ್ರದೇಶಗಳಲ್ಲಿ ಜಾರಿಯಾಗುತ್ತಿವೆ ಕರಾಳ ಕಾನೂನುಗಳು: ವರದಿ
author img

By

Published : Jul 15, 2021, 8:33 PM IST

Updated : Jul 15, 2021, 8:40 PM IST

ಕಾಬೂಲ್(ಅಫ್ಘಾನಿಸ್ತಾನ): ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಹಳೆಯ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ತಾಲಿಬಾನ್ ಆಫ್ಘನ್​​ನಲ್ಲಿ ಜಾರಿ ಮಾಡಲು ಸಿದ್ಧತೆ ನಡೆಸಿದೆ.

ಈಗಾಗಲೇ ಅಫ್ಘಾನಿಸ್ತಾನದ ಶೇಕಡಾ 85ರಷ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಮುಖ್ಯಸ್ಥ ತಿಳಿಸಿದ್ದು, ಈ ಪ್ರದೇಶಗಳಲ್ಲಿ ಷರಿಯತ್ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.

ಮಾನವಹಕ್ಕುಗಳ ರಕ್ಷಣೆ ಮಾಡುವುದಾಗಿ ಹೇಳಿಕೊಂಡಿರುವ ತಾಲಿಬಾನ್ ತಾನು ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ 'ಇಸ್ಲಾಂ ಮೌಲ್ಯ'ಗಳನ್ನು ಎತ್ತಿಹಿಡಿಯುವ, ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಾನೂನುಗಳನ್ನು ರಚಿಸಿ, ಅಳವಡಿಸಲು ಮುಂದಾಗಿದೆ. ತಾಲಿಬಾನ್ ಅಳವಡಿಸಿಕೊಂಡಿರುವ ಕೆಲವು ಕಾನೂನುಗಳೆಂದರೆ..

  • ಪುರುಷ ಜೊತೆಯಲ್ಲಿ ಇಲ್ಲದೇ ಮಹಿಳೆ ಯಾರೂ ಕೂಡಾ ಒಂಟಿಯಾಗಿ ಓಡಾಡುವಂತಿಲ್ಲ ಎಂದು ನಿಯಮ ರೂಪಿಸಲಾಗಿದೆ.
  • ಯಾವುದೇ ಸಮಯವಾದರೂ ಎಲ್ಲಿಗಾದರೂ ಹೋಗಬೇಕಾದರೆ ಪುರುಷನೋರ್ವ ಜೊತೆಯಲ್ಲಿಯೇ ಇರಬೇಕು
  • ಪುರುಷರು ತಮ್ಮ ಗಡ್ಡವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು.
  • 15 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ಮತ್ತು 45 ವರ್ಷದೊಳಗಿನ ವಿಧವೆಯರನ್ನು ತಾಲಿಬಾನಿಗಳಿಗೆ ವಿವಾಹ ಮಾಡಿಸುವುದು.
  • ಭಯೋತ್ಪಾದಕರೂ ಕೂಡಾ ಧೂಮಪಾನ ಮಾಡಬಾರದು ಮತ್ತು ಗಡ್ಡ ತೆಗೆಯಬಾರದು.
  • ನಿಯಮ ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಿ, ಸ್ಥಳೀಯ ಕಾನೂನಿನಂತೆ ಶಿಕ್ಷೆ
  • ಆಫ್ಘನ್​ ಬಾವುಟದಲ್ಲಿರುವ ಬಣ್ಣಗಳಾದ ಕೆಂಪು ಮತ್ತು ಹಸಿರು ಬಟ್ಟೆಗಳನ್ನು ತೊಡುವಂತಿಲ್ಲ.

ಈ ಎಲ್ಲಾ ಅಂಶಗಳನ್ನು ಸ್ಥಳೀಯರು ವಿವಿಧ ಮಾಧ್ಯಮಗಳಿಗೆ ಹೇಳಿರುವ ಹೇಳಿಕೆಗಳಾಗಿದ್ದು, ತಾಲಿಬಾನ್​ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಎಲ್ಲಾ ಆರೋಪಗಳನ್ನು ಸಾಕ್ಷ್ಯರಹಿತ ಎಂದು ತಳ್ಳಿಹಾಕಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಶೃಂಗೇರಿ ಯುವತಿ ಮೇಲೆ ಆ್ಯಸಿಡ್​ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

Last Updated : Jul 15, 2021, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.