ಕಾಬೂಲ್: ಅಫ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆದಿರುವುದಾಗಿ ಅಂತಾರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
-
Rockets hit Kandahar airport in Afghanistan, airport official: AFP pic.twitter.com/sRtxK5Rm0t
— ANI (@ANI) August 1, 2021 " class="align-text-top noRightClick twitterSection" data="
">Rockets hit Kandahar airport in Afghanistan, airport official: AFP pic.twitter.com/sRtxK5Rm0t
— ANI (@ANI) August 1, 2021Rockets hit Kandahar airport in Afghanistan, airport official: AFP pic.twitter.com/sRtxK5Rm0t
— ANI (@ANI) August 1, 2021
ಕಂದಹಾರ್ ಪ್ರಾಂತ್ಯವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ತಾಲಿಬಾನ್ ಉಗ್ರರು ಶತಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಈ ದಾಳಿ ನಡೆಸಿರುವ ಶಂಕೆಯಿದೆ.
ಇದನ್ನೂ ಓದಿ: ಓಮನ್ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಇಬ್ಬರು ಸಾವು
ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಮಾಯಕ ನಾಗರಿಕರು ಮತ್ತು ಸೇನಾ ಸಿಬ್ಬಂದಿಯನ್ನು ನಿರ್ದಯವಾಗಿ ಹತ್ಯೆ ಮಾಡುವ ಮೂಲಕ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಕಂದಹಾರ್ ಬಳಿ ವರದಿ ಮಾಡುತ್ತಿದ್ದ ರಾಯ್ಟರ್ಸ್ ಮಾಧ್ಯಮ ಸಂಸ್ಥೆಯ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿಯನ್ನು ತಾಲಿಬಾನಿಗಳು ಹತ್ಯೆಗೈದಿದ್ದರು.