ಕಾಬೂಲ್(ಅಫ್ಘಾನಿಸ್ತಾನ): ಈಗಾಗಲೇ ಕಾಬೂಲ್ನಲ್ಲಿ ಅಧಿಪತ್ಯ ಸ್ಥಾಪಿಸಿರುವ ಉಗ್ರಪಡೆ, ಪಂಜ್ಶೀರ್ಗೂ ಎಂಟ್ರಿ ಕೊಟ್ಟಿದೆ. ಈ ಬೆನ್ನಲ್ಲೇ, ಅಫ್ಘಾನಿಸ್ತಾನದ ಸ್ವಯಂ ಘೋಷಿತ ಅಧ್ಯಕ್ಷ ಅಮರುಲ್ಲಾ ಸಲೇಹ, ತಾಲಿಬಾನ್ ವಿರುದ್ಧ ಪ್ರತಿರೋಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
-
The RESISTANCE is continuing and will continue. I am here with my soil, for my soil & defending its dignity. https://t.co/FaKmUGB1mq
— Amrullah Saleh (@AmrullahSaleh2) September 3, 2021 " class="align-text-top noRightClick twitterSection" data="
">The RESISTANCE is continuing and will continue. I am here with my soil, for my soil & defending its dignity. https://t.co/FaKmUGB1mq
— Amrullah Saleh (@AmrullahSaleh2) September 3, 2021The RESISTANCE is continuing and will continue. I am here with my soil, for my soil & defending its dignity. https://t.co/FaKmUGB1mq
— Amrullah Saleh (@AmrullahSaleh2) September 3, 2021
ಪಂಜ್ಶೀರ್ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ, ಹೋರಾಡುತ್ತಲೇ ಇರುತ್ತೇವೆ. ನನ್ನ ನೆಲ, ಆ ನೆಲದ ಘನತೆ ರಕ್ಷಿಸಲು ನಾನು ಇಲ್ಲಿದ್ದೇನೆ ಎಂದು ಸಲೇಹ ಟ್ವೀಟ್ ಮಾಡಿದ್ದಾರೆ.
ಆಫ್ಘನ್ಅನ್ನು ತಾಲಿಬಾನ್ ವಶಪಡಿಸಿಕೊಂಡ ಅಂದಿನಿಂದ ಉಗ್ರಪಡೆ ವಿರುದ್ಧ ಸಲೇಹ ಕಿಡಿಕಾರುತ್ತಲೇ ಇದ್ದಾರೆ. ತಾಲಿಬಾನಿಗಳು, ಯುದ್ಧಪೀಡಿತ ದೇಶದಲ್ಲಿ ಆಫ್ಘನ್ನರ ಹಕ್ಕುಗಳ ಬಗ್ಗೆ ಗೌರವ ಹೊಂದಿಲ್ಲ. ಅವರ ಅನಾಗರಿಕ ಕೃತ್ಯಗಳನ್ನು ಖಂಡಿಸುವಂತೆ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲೇಹ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದ 'ಪಂಜ್ಶೀರ್' ಮೇಲೂ ಹಿಡಿತ ಸಾಧಿಸಿದ ತಾಲಿಬಾನ್?
ಪಂಜ್ಶೀರ್ಗೆ ಪ್ರಯಾಣಿಸುವವರ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಪಂಜ್ಶೀರ್ ಸುತ್ತ ಯುವ ಜನರ ಭದ್ರಕೋಟೆ ನಿರ್ಮಿಸಿದ್ದು, ಈ ಪ್ರದೇಶಗಳಿಗೆ ಫೋನ್ ವಿದ್ಯುತ್, ಔಷಧಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜನರು ಸ್ವಲ್ಪ ಹಣವನ್ನು ಮಾತ್ರ ಹೊಂದಿರಬೇಕು ಎಂದು ಸಲೇಹ ಟ್ವೀಟ್ ಮಾಡಿದ್ದಾರೆ.