ETV Bharat / international

ಮ್ಯಾನ್ಮಾರ್: ಅಂತ್ಯಸಂಸ್ಕಾರ ವೇಳೆಯೂ ಮಿಲಿಟರಿ ಪಡೆಯಿಂದ ಗುಂಡಿನ ದಾಳಿ

ಶಾಂತಿಯುತ ಪ್ರತಿಭಟನೆ ಖಂಡಿಸಿ ಜುಂಟಾ ಮಿಲಿಟರಿ ಪಡೆ ದೇಶಾದ್ಯಂತ ಮಕ್ಕಳು, ಮಹಿಳೆಯರು ಸೇರಿ 114ಕ್ಕೂ ಹೆಚ್ಚು ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಹಿಂಸಾಚಾರದ ವೇಳೆ ಹತ್ಯೆಯಾದ ವಿದ್ಯಾರ್ಥಿಯ ಅಂತ್ಯಸಂಸ್ಕಾರ ನಡೆಸುವಾಗ ಕೂಡ ಸೇನೆ ದಾಳಿ ಮಾಡಿದೆ ಎಂದು ವರದಿಯಾಗಿದೆ.

Myanmar forces fire on funeral
ಮ್ಯಾನ್ಮಾರ್
author img

By

Published : Mar 29, 2021, 8:48 AM IST

ಬಾಗೊ(ಮ್ಯಾನ್ಮಾರ್): ಶಾಂತಿಯುತ ಪ್ರತಿಭಟನೆಯನ್ನು ಖಂಡಿಸಿ ಜುಂಟಾ ಮಿಲಿಟರಿ ಪಡೆ ದೇಶಾದ್ಯಂತ 114ಕ್ಕೂ ಹೆಚ್ಚು ನಾಗರಿಕರನ್ನು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿರುವ ವಿಶ್ವಸಂಸ್ಥೆ ಈ ಹಿಂಸಾಚಾರವನ್ನು ನಿಯಂತ್ರಿಸದ ಅಂತಾರಾಷ್ಟ್ರೀಯ ಸಮುದಾಯಗಳನ್ನು ಟೀಕಿಸಿದೆ.

ಸೇನೆಯಿಂದ ಕೊಲ್ಲಲ್ಪಟ್ಟ ವಿದ್ಯಾರ್ಥಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗುಂಪಿನ ಮೇಲೆ ಮ್ಯಾನ್ಮಾರ್ ಭದ್ರತಾ ಪಡೆಗಳು ಭಾನುವಾರ ಗುಂಡು ಹಾರಿಸಿದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಗೊ ನಗರದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಜುಂಟಾ ಸೈನ್ಯವು ಶೋಕತಪ್ತರ ಮೇಲೆ ಗುಂಡು ಹಾರಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ​ ವರದಿ ಮಾಡಿದೆ. ಹತ್ಯೆಗೊಳಗಾದ ವಿದ್ಯಾರ್ಥಿ ದೇಶದಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಗಳನ್ನು ಬೆಂಬಲಿಸುವ ಆಲ್ ಬರ್ಮಾ ಫೆಡರೇಶನ್ ಆಫ್ ಸ್ಟೂಡೆಂಟ್ ಯೂನಿಯನ್ ಸದಸ್ಯರಾಗಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಹಲವು ಜನರನ್ನು ಬಂಧಿಸಲಾಗಿದೆ. ಗುಂಡು ಹಾರಿಸಲಾಗಿದೆ. ಆದರೆ, ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

ಕಳೆದ ತಿಂಗಳು ಮ್ಯಾನ್ಮಾರ್ ನಲ್ಲಿ ಸೇನಾ ದಂಗೆ ನಡೆದ ಬಳಿಕ ನಿನ್ನೆ ದೇಶದ 44 ಪಟ್ಟಣ ಮತ್ತು ನಗರಗಳಲ್ಲಿ ನಾಗರಿಕರ ಹತ್ಯೆ ನಡೆದಿದ್ದು, ಅತ್ಯಂತ ರಕ್ತಪಾತದ ದಿನವಾಗಿದೆ. ಹತ್ಯೆಗೊಂಡವರಲ್ಲಿ 16 ವರ್ಷದ ಒಳಗಿನ ಮಕ್ಕಳು ಸಹ ಸೇರಿದ್ದಾರೆ.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಲವಾರು ಮಕ್ಕಳನ್ನು ಒಳಗೊಂಡಂತೆ ಶನಿವಾರ ಕನಿಷ್ಠ 114 ಜನರ ಪ್ರಾಣ ತೆಗೆದ ಹಿಂಸಾಚಾರವು ಯುಎನ್ ಮಾನವ ಹಕ್ಕುಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲ ತಜ್ಞರು ಇದನ್ನು ಜುಂಟಾ "ಸಾಮೂಹಿಕ ಹತ್ಯೆ" ಎಂದು ಕರೆದಿದ್ದು, ಆಕ್ರೋಶ ವ್ಯಕ್ತಪಡಿಸಿದೆ.

ಯು.ಎನ್. ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಕ್ಕಳು ಸೇರಿದಂತೆ ನಾಗರಿಕರ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ. 12 ದೇಶಗಳ ರಕ್ಷಣಾ ಮುಖ್ಯಸ್ಥರ ಗುಂಪು ಸಹ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದೆ. ಅಮೆರಿಕ ಭದ್ರತಾ ಕೌನ್ಸಿಲ್ ಹಿಂಸಾಚಾರವನ್ನು ಖಂಡಿಸಿದೆ. ''ಮ್ಯಾನ್ಮಾರ್‌ನ ಆಡಳಿತ ಮಂಡಳಿಯು ದೇಶಾದ್ಯಂತ ಪುರುಷರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳನ್ನು ಹತ್ಯೆ ಮಾಡುವ ಮೂಲಕ ಸಶಸ್ತ್ರ ಪಡೆಗಳ ದಿನವನ್ನು ಅಪಖ್ಯಾತಿಯ ದಿನವನ್ನಾಗಿ ಮಾಡಿದೆ" ಎಂದು ಮಾನವ ಹಕ್ಕುಗಳ ಮೇಲಿನ ವಿಶ್ವಸಂಸ್ಥೆ ಸ್ವತಂತ್ರ ತಜ್ಞ ಟಾಮ್ ಆಂಡ್ರ್ಯೂಸ್ ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.