ETV Bharat / international

ಸಂವಿಧಾನ ತಿದ್ದುಪಡಿ ಪ್ರಸ್ತಾವನೆಗೆ ಪುಟಿನ್ ಬೆಂಬಲ: 22ಕ್ಕೆ ದೇಶಾದ್ಯಂತ ವೋಟಿಂಗ್​

author img

By

Published : Mar 11, 2020, 8:20 AM IST

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯನ್ನು ಬೆಂಬಲಿಸಿದ್ದಾರೆ. ಶಾಸಕರು ಮತ್ತು ಅಧ್ಯಕ್ಷರ ಅಧಿಕಾರವಧಿಯ ಮಿತಿಗಳನ್ನು ರದ್ದುಗೊಳಿಸುವುದು ಈ ತಿದ್ದುಪಡಿ ಪ್ರಸ್ತಾವನೆಯಲ್ಲಿ ಒಳಗೊಂಡಿದೆ. ಈ ಪ್ರಸ್ತಾವನೆ ಪಾಸ್​ ಆದರೆ ರಷ್ಯಾದ ಪಸ್ತುತ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಸ್ಥಾನದಲ್ಲಿ ಮುಂದವರೆಯಲು ಇನ್ನೊಂದು ಅವಕಾಶ ಸಿಗಲಿದೆ.

russian constitutional amendment
ಸಾಂವಿಧಾನಿ ತಿದ್ದುಪಡಿ ಪ್ರಸ್ತಾವನೆಗೆ ಪುಟಿನ್ ಬೆಂಬಲ

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯನ್ನು ಬೆಂಬಲಿಸಿದ್ದಾರೆ. ಈ ತಿದ್ದುಪಡಿ ಪ್ರಸ್ತಾವನೆಯು ಪುಟಿನ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಮಗದೊಂದು ಅವಕಾಶವನ್ನು ಒದಗಿಸಲಿದೆ.

ಸೋವಿಯತ್ ಗಗನಯಾತ್ರಿಯಾಗಿ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯಿರುವ ಶಾಸಕಿ ವೆಲೆಂಟೀನಾ ತರಿಶ್ಕೋವ ಈ ತಿದ್ದುಪಡಿ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಶಾಸಕರು ಮತ್ತು ಅಧ್ಯಕ್ಷರ ಅಧಿಕಾರವಧಿಯ ಮಿತಿಗಳನ್ನು ರದ್ದುಗೊಳಿಸುವುದು ಈ ತಿದ್ದುಪಡಿ ಪ್ರಸ್ತಾವನೆಯಲ್ಲಿ ಒಳಗೊಂಡಿದೆ. ಈ ಪ್ರಸ್ತಾವನೆ ಪಾಸ್​ ಆದರೆ ರಷ್ಯಾದ ಪಸ್ತುತ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಸ್ಥಾನದಲ್ಲಿ ಮುಂದವರೆಯಲು ಇನ್ನೊಂದು ಅವಕಾಶ ಸಿಗಲಿದೆ. ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯು ಏಪ್ರಿಲ್ 22 ರಂದು ರಾಷ್ಟ್ರವ್ಯಾಪಿ ಮತದಾನಕ್ಕೆ ಹೋಗಲಿದೆ.

ಸಾಂವಿಧಾನಿಕ ತಿದ್ದುಪಡಿ ಪ್ರಸ್ತಾವನೆಗೆ ಪುಟಿನ್ ಬೆಂಬಲ

ಪ್ರಸ್ತುತ ಕಾನೂನಿನ ಪ್ರಕಾರ ಅಧ್ಯಕ್ಷ ಅಧಿಕಾರವಧಿ ಅವಧಿಗಳು ಮಾತ್ರವೇ ಇದೆ. ಒಮ್ಮೆ ಆಯ್ಕೆ ಆದರೆ ಅಧ್ಯಕ್ಷರ ಅಧಿಕಾರಾವಧಿ ಆರು ವರ್ಷಗಳು ಇರಲಿದೆ. ಪುಟಿನ್ ಆರು ವರ್ಷಗಳ ಅಧಿಕಾರವಧಿ 2024ಕ್ಕೆ ಕೊನೆಗೊಳ್ಳಲಿದೆ. 67 ವರ್ಷ ವಯಸ್ಸಿನ ವ್ಲಾಡಿಮಿರ್ ಪುಟಿನ್, ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದು, ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಬಳಿಕ ಧೀರ್ಘ ಕಾಲದ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1999ರಿಂದಲೇ ಅಧಿಕಾರದಲ್ಲಿರುವ ವ್ಲಾಡಿಮಿರ್​ ಪುಟಿನ್​​​, ಮೊದಲು ಎರಡು ಅವಧಿಗೆ ಅಧ್ಯಕ್ಷರಾಗಿದ್ದರು. ಎರಡು ಅವಧಿಗಳು ಮುಗಿದ ಬಳಿಕ ತಮ್ಮ ಆಪ್ತ ಮೆಡ್ವಡೇವ್​ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸುವಲ್ಲಿ ಪುಟಿನ್​ ಯಶಸ್ವಿಯಾಗಿದ್ದರು. ಆಗ ಪುಟಿನ್​ ರಷ್ಯಾದ ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದ್ದರು. ಅದಾದ ಬಳಿಕ ಮತ್ತೆ ಅಧ್ಯಕ್ಷ ಪದವಿಗೇರಿದ ಪುಟಿನ್​ ಎರಡನೇ ಅವಧಿಯಲ್ಲೂ ಎರಡು ಬಾರಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಅವರ ಎರಡನೇ ಬಾರಿಯ ಎರಡು ಅವಧಿ 2024ಕ್ಕೆ ಕೊನೆಗೊಳ್ಳಲಿದೆ. ಅಷ್ಟರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ ಅಧಿಕಾರ ಚಲಾಯಿಸುವ ಗುರಿಯನ್ನ ಪುಟಿನ್ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.