ಲಾಹೋರ್, ಪಾಕಿಸ್ತಾನ : ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ್ಮೇಲೆ ಸಾಮರಸ್ಯ, ಸಹೋದರತೆ ಕೂಡ ಇಬ್ಭಾಗವಾಗಿತ್ತು. ಒಂದೇ ಕುಟುಂಬದ ಒಡಹುಟ್ಟಿದವರೂ ಇಬ್ಭಾಗವಾಗಿದ್ದರು. ಆ ರೀತಿ ಬೇರೆ ಬೇರೆಯಾದ ಸುಮಾರು 200ಕ್ಕೂ ಹೆಚ್ಚು ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಮತ್ತೆ ಒಂದುಗೂಡಿಸುವ ಮಹತ್ಕಾರ್ಯವನ್ನ ಪಂಜಾಬಿಯ ಲೆಹರ್ ಎಂಬ ಯೂಟ್ಯೂಬ್ ಚಾನೆಲ್‌ವೊಂದು ಮಾಡಿದೆ.
ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನದ ಕರ್ತಾರ್‌ಪುರದಲ್ಲಿ ಮತ್ತೆ ಒಂದಾಗಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಇಂಥದ್ದೇ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳನ್ನು, ಸ್ನೇಹಿತರನ್ನು ಒಗ್ಗೂಡಿಸಿರುವುದಾಗಿ ಪಂಜಾಬಿ ಲೆಹರ್ ಹೇಳಿಕೊಂಡಿದೆ.
ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತದ ಪಂಜಾಬ್‌ನ ಫುಲ್ಲನ್‌ವಾಲ್ ಪ್ರದೇಶದಿಂದ ಹಬೀಬ್ ಎಂಬುವರು ಬಂದಿದ್ದು, ಅಲ್ಲಿ ಅವರ ಕಿರಿಯ ಸಹೋದರ ಮೊಹಮ್ಮದ್ ಸಿದ್ದಿಕ್ ಅವರನ್ನು (80) ಭೇಟಿಯಾಗಿದ್ದರು. ಸಿದ್ದಿಕ್ ಪ್ರಸ್ತುತ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.
-
Kartarpur Sahib corridor has reunited two elderly brothers across the Punjab border after 74 years. The two brothers had parted ways at the time of partition. A corridor of reunion 🙏 pic.twitter.com/g2FgQco6wG
— Gagandeep Singh (@Gagan4344) January 12, 2022 " class="align-text-top noRightClick twitterSection" data="
">Kartarpur Sahib corridor has reunited two elderly brothers across the Punjab border after 74 years. The two brothers had parted ways at the time of partition. A corridor of reunion 🙏 pic.twitter.com/g2FgQco6wG
— Gagandeep Singh (@Gagan4344) January 12, 2022Kartarpur Sahib corridor has reunited two elderly brothers across the Punjab border after 74 years. The two brothers had parted ways at the time of partition. A corridor of reunion 🙏 pic.twitter.com/g2FgQco6wG
— Gagandeep Singh (@Gagan4344) January 12, 2022
ಇನ್ನು ಪಂಜಾಬಿ ಲೆಹರ್ ಯೂಟ್ಯೂಬ್ ಚಾನೆಲ್ಗೆ 5 ಲಕ್ಷದ 31 ಸಾವಿರಕ್ಕೂ ಹೆಚ್ಚು ಚಂದಾದಾರಿದ್ದು, ನಾಸಿರ್ ಧಿಲ್ಲೋನ್ ಎಂಬಾತ ಈ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಪೂರ್ವ ಪಂಜಾಬ್ (ಭಾರತದ ಪಂಜಾಬ್) ಮತ್ತು ಪಶ್ಚಿಮ ಪಂಜಾಬ್ (ಪಾಕಿಸ್ತಾನದ ಪಂಜಾಬ್) ಜನರ ನಡುವಿನ ಅಂತರವನ್ನು ಕಡಿಮೆ ಮಾಡುವುದೇ ಯೂಟ್ಯೂಬ್ ಚಾನೆಲ್ನ ಗುರಿ ಎಂದು ಹೇಳಿಕೊಂಡಿದ್ದಾರೆ.
ಗಡಿಯ ಎರಡೂ ಕಡೆಯ ಜನರು 1947ರಲ್ಲಿ ರಕ್ತಸಿಕ್ತ ಗಲಭೆಗಳ ಸಮಯದಲ್ಲಿ ತಮ್ಮ ಹತ್ತಿರದ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರಿಂದ ಬೇರೆ ಬೇರೆಯಾದ ಕತೆಗಳನ್ನು ಕೇಳಿ ಆ ಮೂಲಕ ಮತ್ತೊಬ್ಬರನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತದೆ ಎಂದು ನಾಸಿರ್ ಧಿಲ್ಲೋನ್ ಹೇಳಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆಯ ವೇಳೆ ಬೇರ್ಪಟ್ಟ ಸಹೋದರರು.. 74 ವರ್ಷದ ಬಳಿಕ ಒಂದಾದ ಅಣ್ಣ - ತಮ್ಮ !