ಗುಯಿಝೌ(ಚೀನಾ): ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆಯ ಏರಿಕೆಗೆ ಹಾಗೂ ಜನರ ಜೀವನಮಟ್ಟ ಸುಧಾರಣೆ ತರಲು ಪ್ರಧಾನಿ ಮೋದಿ ಅವರು ಸಾಕಷ್ಟು ಪ್ರಯತ್ನಿಸಿದ್ದಾರೆ ಎಂದು ಚೀನಾ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ದೆಗಿಯಿ ಪ್ರಶಂಸಿದ್ದಾರೆ.
ಮೋದಿ ನಾಯಕತ್ವದ ಆಡಳಿತದಲ್ಲಿ ಭಾರತ ಸಾಕಷ್ಟು ಸುಧಾರಣೆ ಕಂಡಿದೆ. ಭಾರತ ಮತ್ತು ಚೀನಾ ದೀರ್ಘಕಾಲದ ಸ್ನೇಹ- ಸೌಹಾರ್ದ ಸಂಬಂಧ ದೊಂದಿದೆ ಎಂದು ದೆಗಿಯಿ ಗುಯಿಝೌ ಪ್ರಾಂತ್ಯದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ಸಭೆಯಲ್ಲಿ ಹೇಳಿದ್ದಾರೆ.
ಚೀನಾ ಭಾರತ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಹೋಗುತ್ತಿದೆ. ರಾಜಕೀಯ ನಂಬಿಕೆ ಮತ್ತು ಪರಸ್ಪರ ಸಹಕಾರದ ಸಹಭಾಗಿತ್ವದಡಿ ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಲು ಚೀನಾ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ.