ನವದೆಹಲಿ: ಶ್ರೀಲಂಕಾ ಸಂಸತ್ ಚುನಾವಣೆಯಲ್ಲಿ ಮಹಿಂದ್ ರಾಜಪಕ್ಸೆ ಭರ್ಜರಿ ಗೆಲುವಿನತ್ತ ಮುನ್ನಡೆದಿದ್ದಾರೆ. ಆರಂಭಿಕ ಫಲಿತಾಂಶಗಳು ಅವರ ಪಕ್ಷ ಭಾರಿ ಬಹುಮತ ಪಡೆಯುವ ಎಲ್ಲ ಲಕ್ಷಣಗಳನ್ನು ತೋರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಹವರ್ತಿ ಲಂಕಾ ಪ್ರಧಾನಿಗೆ ಪಿಎಂ ಮೋದಿ ಶುಭಾಶಯ ಕೋರಿದ್ದಾರೆ.
ಎರಡು ಬಾರಿ ಮುಂದೂಡಿಕೆ ಆಗಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಅಂತಿಮವಾಗಿ ಮೊನ್ನೆಯಷ್ಟೇ ನಡೆದಿತ್ತು. ಅದರ ಮತ ಎಣಿಕೆ ನಿನ್ನೆಯಿಂದ ಆರಂಭವಾಗಿದ್ದು, ಇಂದು ಅಂತಿಮ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಆರಂಭಿಕ ಟ್ರೆಂಡ್ ಪ್ರಕಾರ ಮಹಿಂದ ರಾಜಪಕ್ಸೆ ಪಕ್ಷ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಕಲ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಕ್ಸೆ ಅವರನ್ನು ಅಭಿನಂದಿಸಿದ್ದು, ಕೋವಿಡ್ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಚುನಾವಣೆ ಆಯೋಜಿಸಿದ್ದಕ್ಕೆ ಅಲ್ಲಿನ ಚುನಾವಣಾ ಆಯೋಗವನ್ನ ಪ್ರಧಾನಿ ಶ್ಲಾಘಿಸಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.
-
Thank you, Prime Minister @PresRajapaksa! It was a pleasure to speak to you. Once again, many congratulations. We will work together to further advance all areas of bilateral cooperation and to take our special ties to ever newer heights. https://t.co/123ahoxlMo
— Narendra Modi (@narendramodi) August 6, 2020 " class="align-text-top noRightClick twitterSection" data="
">Thank you, Prime Minister @PresRajapaksa! It was a pleasure to speak to you. Once again, many congratulations. We will work together to further advance all areas of bilateral cooperation and to take our special ties to ever newer heights. https://t.co/123ahoxlMo
— Narendra Modi (@narendramodi) August 6, 2020Thank you, Prime Minister @PresRajapaksa! It was a pleasure to speak to you. Once again, many congratulations. We will work together to further advance all areas of bilateral cooperation and to take our special ties to ever newer heights. https://t.co/123ahoxlMo
— Narendra Modi (@narendramodi) August 6, 2020
ಶ್ರೀಲಂಕಾದ ಜನರು ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದನ್ನು ಮೋದಿ ಕೊಂಡಾಡಿದ್ದಾರೆ. ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಪಾರ್ಟಿ ಸಂಸತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದೆ ಎಂದು ಗುರುವಾರ ಪ್ರಕಟವಾದ ಆರಂಭಿಕ ಫಲಿತಾಂಶಗಳು ತಿಳಿಸಿವೆ.
ಪ್ರಧಾನಿ ಅವರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಕ್ಕೆ ಲಂಕಾ ಪ್ರಧಾನಿ ರಾಜಪಕ್ಸೆ ಸಹ ಟ್ವಿಟರ್ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ. "ಶ್ರೀಲಂಕಾದ ಜನರ ಬಲವಾದ ಬೆಂಬಲದೊಂದಿಗೆ, ನಮ್ಮ ಉಭಯ ದೇಶಗಳ ನಡುವಿನ ದೀರ್ಘಕಾಲದ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ರಾಜಪಕ್ಸೆ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.