ಇಸ್ಲಾಮಾಬಾದ್ (ಪಾಕಿಸ್ತಾನ): ಟೆಲಿವಿಷನ್ ಡಿಬೇಟ್ನಲ್ಲಿ ಪ್ಯಾನಲ್ ಚರ್ಚೆಗೆ ಆಗಮಿಸುವ ಅತಿಥಿಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆ ಮಾಡುವ ವೇಳೆ ಸಿಟ್ಟಿಗೆದ್ದ ಮಹಿಳಾ ನಾಯಕಿ, ಪ್ರತಿ ಪಕ್ಷದ ಸಂಸದನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಪಾಕಿಸ್ತಾನದ ಎಕ್ಸ್‌ಪ್ರೆಸ್ ಟಿವಿಯಲ್ಲಿ ನಡೆಯುತ್ತಿದ್ದ ನೇರಪ್ರಸಾರದಲ್ಲಿಯೇ ಮಹಿಳೆ ಕಪಾಳಮೋಕ್ಷ ಮಾಡಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.
ಪ್ಯಾನಲ್ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಪರವಾಗಿ ಮಾತನಾಡಲು ಪಕ್ಷದ ನಾಯಕಿ ಡಾ.ಫಿರ್ದೌಸ್ ಆಶಿಕ್ ಭಾಗಿಯಾಗಿದ್ದರು. ಈ ವೇಳೆ, ಪ್ರತಿ ಪಕ್ಷದ ಸಂಸದ ಖಾದಿರ್ ಖಾನ್ ಮಂಡೋಖೈಲ್ ವಿರುದ್ಧ ವಾಗ್ದಾಳಿ ನಡೆಸಿದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಸಿಟ್ಟಿಗೆದ್ದ ಮಹಿಳೆ ಸಂಸದ ಮಂಡೋಖೈಲ್ಗೆ ಕಪಾಳಮೋಕ್ಷ ಮಾಡಿದ್ದಾರೆ.
-
ٹاک شو کے دوران پیپلزپارٹی کے قادر مندوخیل کی جانب دھمکیاں دی گئیں۔ قادر مندوخیل نے بدزبانی اور بدکلامی کرتے ہوئے میرے مرحوم والد اور مجھے گالیاں دیں۔ اپنے دفاع میں مجھے انتہائی قدم اٹھانا پڑا! قانونی ٹیم سے مشاورت کےبعد قادر مندوخیل کےخلاف قانونی چارہ جوئی کی جائیگی۔ pic.twitter.com/7AbDNMaHV0
— Dr. Firdous Ashiq Awan (@Dr_FirdousPTI) June 9, 2021 " class="align-text-top noRightClick twitterSection" data="
">ٹاک شو کے دوران پیپلزپارٹی کے قادر مندوخیل کی جانب دھمکیاں دی گئیں۔ قادر مندوخیل نے بدزبانی اور بدکلامی کرتے ہوئے میرے مرحوم والد اور مجھے گالیاں دیں۔ اپنے دفاع میں مجھے انتہائی قدم اٹھانا پڑا! قانونی ٹیم سے مشاورت کےبعد قادر مندوخیل کےخلاف قانونی چارہ جوئی کی جائیگی۔ pic.twitter.com/7AbDNMaHV0
— Dr. Firdous Ashiq Awan (@Dr_FirdousPTI) June 9, 2021ٹاک شو کے دوران پیپلزپارٹی کے قادر مندوخیل کی جانب دھمکیاں دی گئیں۔ قادر مندوخیل نے بدزبانی اور بدکلامی کرتے ہوئے میرے مرحوم والد اور مجھے گالیاں دیں۔ اپنے دفاع میں مجھے انتہائی قدم اٹھانا پڑا! قانونی ٹیم سے مشاورت کےبعد قادر مندوخیل کےخلاف قانونی چارہ جوئی کی جائیگی۔ pic.twitter.com/7AbDNMaHV0
— Dr. Firdous Ashiq Awan (@Dr_FirdousPTI) June 9, 2021
ಮಾತಿನ ನಡುವೆ ಇಬ್ಬರು ಪ್ಯಾನಲಿಸ್ಟ್ಗಳು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ ಬಳಿಕ ತಾಳ್ಮೆ ಕಳೆದುಕೊಂಡ ಮಹಿಳಾ ನಾಯಕಿ ಸಂಸದನಿಗೆ ಕಪಾಳಮೋಕ್ಷ ಮಾಡಿದ್ದಾರೆ.