ETV Bharat / international

ಶೌಚಾಲಯವೆಂದು ವಿಮಾನದ ತುರ್ತು ಬಾಗಿಲು​ ತೆಗೆದ ಮಹಿಳೆ! ಮುಂದ? -

ಈ ವಿಮಾನ ಮ್ಯಾಂಚೆಸ್ಟರ್​ನಿಂದ ಇಸ್ಲಾಮಾಬಾದ್​ಗೆ ತೆರಳುತ್ತಿತ್ತು. ಮಹಿಳೆಯ ಈ ನಡೆಯಿಂದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೆಲಕಾಲ ಆತಂಕಕ್ಕೆ ಒಳಗಾದರು.

ಸಾಂದರ್ಭಿಕ ಚಿತ್ರ
author img

By

Published : Jun 9, 2019, 10:31 PM IST

ಇಸ್ಲಾಮಾಬಾದ್​: ಪಾಕಿಸ್ತಾನದ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ ವಿಮಾನದಲ್ಲಿ (ಸಿಐಎ) ಮಹಿಳೆಯೊಬ್ಬರು ತುರ್ತು ನಿರ್ಗಮನ ದ್ವಾರವನ್ನೇ ಶೌಚಾಲಯದ ಬಾಗಿಲು ಎಂದು ತೆರೆದಿದ್ದಾರೆ.

ಈ ವಿಮಾನ ಮ್ಯಾಂಚೆಸ್ಟರ್​ನಿಂದ ಇಸ್ಲಾಮಾಬಾದ್​ಗೆ ತೆರಳುತ್ತಿತ್ತು. ಮಹಿಳೆಯ ಈ ನಡೆಯಿಂದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೆಲಕಾಲ ಆತಂಕಕ್ಕೆ ಒಳಗಾದರು.

ವಿಮಾನ ರನ್​ವೇನಲ್ಲಿದ್ದಾಗ ಮಹಿಳೆ ತುರ್ತು ನಿರ್ಗಮನ ಬಾಗಿಲು ತೆರೆದಿದ್ದಾರೆ. ಮಹಿಳೆಯ ಅಚಾತುರ್ಯದಿಂದ ಪಿಕೆ 702 ವಿಮಾನ ಏಳು ಗಂಟೆ ವಿಳಂಬವಾಯಿತು ಎಂದು ವಿಮಾನಯಾನ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.

40 ಪ್ರಯಾಣಿಕರಿಗೆ ಹೊಟೇಲ್​ನಲ್ಲಿ ತಂಗಲು ವ್ಯವಸ್ಥೆ ಮಾಡಿ, ಬಳಿಕ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸಲಾಯಿತು. ಈ ಘಟನೆ ಕುರಿತು ತನಿಖೆ ನಡೆಸುವಂತೆ ಪಿಐಎ ಮುಖ್ಯ ಕಾರ್ಯನಿರ್ವಾಹಕರು ಆದೇಶಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.