ETV Bharat / international

ಈಗಲೂ ತಾಲಿಬಾನ್​ ಮುಕ್ತ ಆಫ್ಘನ್​ ಪ್ರಾಂತ್ಯವೊಂದಿದೆ.. ಯಾವುದು ಗೊತ್ತಾ? - ಪಂಜ್‌ಶೀರ್​ ಪ್ರಾಂತ್ಯ

'ಐದು ಸಿಂಹಗಳ ಕಣಿವೆ' ಎಂದು ಕರೆಯಲ್ಪಡುವ ಪಂಜ್‌ಶೀರ್​ ಪ್ರಾಂತ್ಯವು ತಾಲಿಬಾನ್​ ಮುಕ್ತವಾಗಿರುವ ಏಕೈಕ ಪ್ರದೇಶವಾಗಿದ್ದು, ಈ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ..

panjshir province
ಪಂಜ್‌ಶೀರ್​ ಪ್ರಾಂತ್ಯ
author img

By

Published : Aug 19, 2021, 8:03 PM IST

ಕಾಬೂಲ್​ (ಅಫ್ಘಾನಿಸ್ತಾನ): ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್​ ವಶಪಡಿಸಿಕೊಂಡಿದ್ದರೂ ಕಾಬೂಲ್‌ನ ಈಶಾನ್ಯದಿಂದ 100 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಪಂಜ್‌ಶೀರ್​ ಪ್ರಾಂತ್ಯ ಈಗಲೂ ಕೂಡ ತಾಲಿಬಾನ್​ ಮುಕ್ತವಾಗಿರುವ ಏಕೈಕ ಪ್ರದೇಶವಾಗಿದೆ. ಈ ಪ್ರಾಂತ್ಯವನ್ನು ಇಲ್ಲಿಯವರೆಗೆ ಯಾವ ವಿದೇಶಿಗರೂ ಹಾಗೂ ತಾಲಿಬಾನಿಗಳು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಒಂದಾಗಿರುವ ಪಂಜಶೀರ್, ಒಂದು ಸುಂದರವಾದ ಕಣಿವೆ. ಸುಮಾರು 1,73,000 ಜನಸಂಖ್ಯೆಯನ್ನು ಹೊಂದಿರುವ ಈ ಪ್ರಾಂತ್ಯದ ರಾಜಧಾನಿ ಬಜಾರಕ್ ಆಗಿದೆ. ನಾನು ದೇಶ ಬಿಟ್ಟು ಓಡಿ ಹೋಗಲ್ಲ. ಯಾವುದೇ ಕಾರಣಕ್ಕೂ ತಾಲಿಬಾನ್​ಗೆ ಶರಣಾಗಲ್ಲ. ನಾನೇ ಅಫ್ಘನ್ ಅಧ್ಯಕ್ಷ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಈ ಪ್ರದೇಶದಲ್ಲಿದ್ದುಕೊಂಡೇ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ನಾನೇ ಆಫ್ಘನ್​ ಅಧ್ಯಕ್ಷ ಎಂದಿದ್ದ ಅಮರುಲ್ಲಾ ಸಲೇಹ್ Twitter ಖಾತೆ ಸಸ್ಪೆಂಡ್​..!

ತಾಲಿಬಾನ್ ವಿರುದ್ಧದ ಪ್ರತಿರೋಧಕ್ಕೆ ಭದ್ರಕೋಟೆಯಾಗಿ ಕಾರ್ಯನಿರ್ವಹಿಸುವ ಪಂಜ್‌ಶಿರ್ ಪ್ರಾಂತ್ಯದ ಬಗ್ಗೆ ನೀವು ತಿಳುದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

  • 1980ರ ದಶಕದಲ್ಲಿ ಸೋವಿಯತ್ ವಿರುದ್ಧ ಮತ್ತು ನಂತರ 1990ರಲ್ಲಿ ತಾಲಿಬಾನ್ ವಿರುದ್ಧ ಹೋರಾಟದ ಭದ್ರಕೋಟೆಯಾಗಿತ್ತು ಈ ಪ್ರಾಂತ್ಯ.
  • ಅಮರುಲ್ಲಾ ಸಲೇಹ್ ಪಂಜಶೀರ್ ಪ್ರಾಂತ್ಯದಲ್ಲಿ ಜನಿಸಿದವರು ಮತ್ತು ಇಲ್ಲಿಯೇ ತರಬೇತಿ ಪಡೆದವರು.
  • ಇದು ಯಾವಾಗಲೂ ಪ್ರತಿರೋಧದ ಭದ್ರಕೋಟೆಯಾಗಿ ಉಳಿದಿದ್ದರಿಂದ, ಅದನ್ನು ಎಂದಿಗೂ ಯಾವುದೇ ಪಡೆಗಳು ವಶಪಡಿಸಿಕೊಂಡಿಲ್ಲ.
  • 10ನೇ ಶತಮಾನದಲ್ಲಿ ಘಜ್ನಿಯ ಸುಲ್ತಾನ್ ಮಹ್ಮದ್​ಗಾಗಿ ಐವರು ಸಹೋದರರು ಇಲ್ಲಿ ಅಣೆಕಟ್ಟನ್ನು ನಿರ್ಮಿಸಿ, ಪ್ರವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಪಂಜಶೀರ್ ಕಣಿವೆಯನ್ನು 'ಐದು ಸಿಂಹಗಳ ಕಣಿವೆ' ಎಂದು ಕರೆಯಲಾಗುತ್ತದೆ.
  • ಈ ಕಣಿವೆಯು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ ಮತ್ತು ತಾಜಿಕ್‌ ಜನಾಂಗದವರನ್ನು ಅತಿ ಹೆಚ್ಚು ಹೊಂದಿದೆ ಪ್ರದೇಶವಾಗಿದೆ.
  • ಪಂಜಶೀರ್​​ ಮೂಲದ ರಾಜಕಾರಣಿ ಮತ್ತು ಸೇನಾ ಕಮಾಂಡರ್ ಆಗಿದ್ದ ಅಹ್ಮದ್ ಶಾ ಮಸೂದ್​ರನ್ನು 2001ರಲ್ಲಿ ಅಲ್ ಖೈದಾ ಮತ್ತು ತಾಲಿಬಾನ್​​ಗಳು ನಡೆಸಿದ ದಾಳಿಯಲ್ಲಿ ಕೊಲ್ಲಲಾಗಿತ್ತು. ಈ ಬಳಿಕ ತಾಲಿಬಾನ್​ ವಿರುದ್ಧ ಮತ್ತಷ್ಟು ಪ್ರಬಲರಾದರು ಪಂಜಶೀರ್ ಜನತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.