ETV Bharat / international

ಚೀನಾ ಮಾರುಕಟ್ಟೆಗೆ ಕೊರೊನಾ ಹೊಡೆತ : ಕುಂಟುತ್ತಾ ಸಾಗಿದ ಆರ್ಥಿಕತೆ ವೇಗ

author img

By

Published : Dec 15, 2021, 7:10 PM IST

ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಿದ್ದೇವೆ ಎಂದು ಕಮ್ಯುನಿಸ್ಟ್ ಸರ್ಕಾರ ಘೋಷಿಸುತ್ತಿರುವ ಬೆನ್ನಲ್ಲೇ ಹೊಸ ರೂಪಾಂತರಿ ಪ್ರಕರಣಗಳು ದೃಢವಾಗುತ್ತಿವೆ. ಈ ನಡುವೆ ಆರ್ಥಿಕತೆಯು ಜುಲೈ-ಸೆಪ್ಟೆಂಬರ್‌ನಲ್ಲಿ ಅನಿರೀಕ್ಷಿತವಾಗಿ ಶೇ.4.9ರಷ್ಟು ಕೆಳಗೆ ಕುಸಿದಿದೆ. ಇದು ಕಳೆದ ಏಪ್ರಿಲ್-ಜೂನ್‌ನಲ್ಲಿ ಶೇ.7.9ರಷ್ಟಕ್ಕೆ ತಲುಪಿತ್ತು..

chinas-economy
ಚೀನಾ ಮಾರುಕಟ್ಟೆ

ಬೀಜಿಂಗ್(ಚೀನಾ) : ಕೊರೊನಾ ವೈರಸ್​​​​​ನ ಹೊಡೆತದಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ಅಡೆತಡೆ ಉಂಟಾದ ಕಾರಣದಿಂದಾಗಿ ನವೆಂಬರ್‌ನಲ್ಲಿ ಚೀನಾದ ಆರ್ಥಿಕತೆ ನಿಧಾನಗತಿಯ ವೇಗಕ್ಕೆ ಸಿಲುಕಿದೆ ಎಂದು ಬುಧವಾರ ವರದಿಯಾಗಿದೆ.

ಚೀನಾದಲ್ಲಿ ಚಿಲ್ಲರೆ ಮಾರಾಟ ಸಹ ಅಕ್ಟೋಬರ್​​ನಲ್ಲಿ ದುರ್ಬಲವಾಗಿದೆ. ಕಠಿಣ ಮಿತಿಗಳ ಕಾರಣದಿಂದ ವ್ಯಾಪಾರ ವಲಯ ತೀವ್ರ ಸಂಕಷ್ಟ ಎದುರಿಸಿ ಮಾರಾಟ ಕುಗ್ಗಿದ್ದಲ್ಲದೆ ಹಣದುಬ್ಬರ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿ 4 ರಿಂದ 20ರವರೆಗೆ ವಿಂಟರ್ ಒಲಿಂಪಿಕ್ಸ್ ಚೀನಾದಲ್ಲಿ ನಡೆಯಲಿದೆ. ಆರ್ಥಿಕ ಸ್ಥಿತಿಯ ಮೇಲೆ ಒಟ್ಟಾರೆಯಾಗಿ ಸೀಮಿತ ಪರಿಣಾಮ ಬೀರಬಹುದು ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವಕ್ತಾರ ಫು ಲಿಂಗುಯಿ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಈ ವೇಳೆ ಸಹ ಕೊರೊನಾ ನಿರ್ಬಂಧಗಳು ಇತರೆ ಕಾರ್ಯ ಚಟುವಟಿಕೆಯನ್ನ ಸೀಮಿತಗೊಳಿಸಲಿವೆ ಎಂದು ಅವರು ಹೇಳಿದ್ದಾರೆ.

ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಿದ್ದೇವೆ ಎಂದು ಕಮ್ಯುನಿಸ್ಟ್ ಸರ್ಕಾರ ಘೋಷಿಸುತ್ತಿರುವ ಬೆನ್ನಲ್ಲೇ ಹೊಸ ರೂಪಾಂತರಿ ಪ್ರಕರಣಗಳು ದೃಢವಾಗುತ್ತಿವೆ. ಈ ನಡುವೆ ಆರ್ಥಿಕತೆಯು ಜುಲೈ-ಸೆಪ್ಟೆಂಬರ್‌ನಲ್ಲಿ ಅನಿರೀಕ್ಷಿತವಾಗಿ ಶೇ.4.9ರಷ್ಟು ಕೆಳಗೆ ಕುಸಿದಿದೆ. ಇದು ಕಳೆದ ಏಪ್ರಿಲ್-ಜೂನ್‌ನಲ್ಲಿ ಶೇ.7.9ರಷ್ಟಕ್ಕೆ ತಲುಪಿತ್ತು.

ನವೆಂಬರ್‌ನಲ್ಲಿ ಚಿಲ್ಲರೆ ಮಾರಾಟವು ಹಿಂದಿನ ವರ್ಷಕ್ಕಿಂತ ಶೇ.3.9ರಷ್ಟು ಇಳಿಕೆ ಕಂಡಿದೆ. ಹಿಂದಿನ ತಿಂಗಳು ಈ ದರವು ಶೇ.4ರಷ್ಟಿತ್ತು ಎಂದು ವರದಿಯಾಗಿದೆ. ಆದರೆ, ಕೈಗಾರಿಕಾ ಉತ್ಪಾದನೆಯೂ ಅಕ್ಟೋಬರ್​​ ತಿಂಗಳಲ್ಲಿ ಶೇ.3.5ರಷ್ಟಿತ್ತು. ಈ ಪ್ರಮಾಣ ನವೆಂಬರ್​​ನಲ್ಲಿ 3.8ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಸ್ಪೇಸ್​ ಎಕ್ಸ್​, ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಟೈಮ್​ ನಿಯತಕಾಲಿಕೆಯ 'ವರ್ಷದ ವ್ಯಕ್ತಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.