ETV Bharat / international

ಕೋವಿಡ್ ಲಸಿಕೆ ತೆಗೆದುಕೊಳ್ಳದಿದ್ದರೆ ಸಿಮ್ ಬ್ಲಾಕ್​: ಪಾಕ್​ ಪ್ರಾಂತ್ಯದಲ್ಲಿ ವಿನೂತನ ಪ್ರಯೋಗ

ಆಗಸ್ಟ್ 31ರೊಳಗೆ ಲಸಿಕೆ ಪಡೆದುಕೊಳ್ಳಲು ವಿಫಲರಾದವರ ಸಿಮ್​ ಕಾರ್ಡ್​ಗಳನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಖೈಬರ್ ಪಖ್ತುಂಖ್ವಾ ಸರ್ಕಾರ ಆದೇಶ ಹೊರಡಿಸಿದೆ.

Pakistan's KP province to block sim cards of unvaccinated people: Report
ಕೋವಿಡ್ ಲಸಿಕೆ ತೆಗೆದುಕೊಳ್ಳದಿದ್ದರೆ ಸಿಮ್ ಬ್ಲಾಕ್​: ಪಾಕ್​ ರಾಜ್ಯದಲ್ಲಿ ವಿನೂತನ ಪ್ರಯೋಗ
author img

By

Published : Aug 22, 2021, 4:15 AM IST

Updated : Aug 22, 2021, 6:10 AM IST

ಇಸ್ಲಾಮಾಬಾದ್, ಪಾಕಿಸ್ತಾನ: ಕೋವಿಡ್ ಸೋಂಕು ತಡೆಯುವ ಸಲುವಾಗಿ ಪಾಕಿಸ್ತಾನದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ತೀವ್ರಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವಂತೆ ಮಾಡಲು ವಿಭಿನ್ನ ಕ್ರಮವೊಂದನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಸರ್ಕಾರ ವಿಭಿನ್ನ ಕ್ರಮವೊಂದನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಕೋವಿಡ್ ವ್ಯಾಕ್ಸಿನ್ ಪಡೆಯದವರ ಮೊಬೈಲ್​​ ಸಿಮ್ ಕಾರ್ಡ್​ಗಳನ್ನು ಬ್ಲಾಕ್ ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪೇಷಾವರ ವಿಭಾಗದ ಐದು ಜಿಲ್ಲೆಗಳಾದ ಪೇಷಾವರ, ಮೊಹ್ಮದ್​​, ಖೈಬರ್​, ಚರ್ಸಡ್ಡ, ನೌಷೇರಾಗಳಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಆಗಸ್ಟ್ 31ರೊಳಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಅಂತಹ ವ್ಯಕ್ತಿಗಳ ಸಿಮ್​ ಕಾರ್ಡ್​​ ಬ್ಲಾಕ್​ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಡಾನ್ ವರದಿ ಮಾಡಿದೆ.

ಪೇಷಾವರ ವಿಭಾಗದ ಕಮೀಷನರ್ ರಿಯಾಜ್ ಖಾನ್ ಮೆಹ್ಸೂದ್ ಈ ಕುರಿತು ಮಾಹಿತಿ ನೀಡಿದ್ದು, ಶನಿವಾರದಿಂದ ನಾವು ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುತ್ತಿದ್ದೇವೆ. ಆಗಸ್ಟ್ 31ರೊಳಗೆ ಲಸಿಕೆ ಪಡೆದುಕೊಳ್ಳಲು ವಿಫಲರಾದವರ ಸಿಮ್​ ಕಾರ್ಡ್​ಗಳನ್ನು ಬ್ಲಾಕ್ ಮಾಡಲಾಗುತ್ತದೆ ಎಂದಿದ್ದಾರೆ.

ಜಿಲ್ಲಾಡಳಿತಗಳು ಕೋವಿಡ್​​​ ವೈರಸ್ ಹರಡುವುದನ್ನು ತಡೆಗಟ್ಟಲು ಫೇಸ್ ಮಾಸ್ಕ್ ಬಳಕೆ, ಸಾಮಾಜಿಕ ದೂರ ನಿಯಮಗಳ ಅನುಸರಣೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ರಿಯಾಜ್ ಖಾನ್ ಮೆಹ್ಸೂದ್ ಸೂಚಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ಇದನ್ನೂ ಓದಿ: ಮೊದಲ 'ಫತ್ವಾ'ದಲ್ಲೇ ಬುದ್ಧಿ ತೋರಿಸಿದ ತಾಲಿಬಾನ್.. ವಿಶ್ವವಿದ್ಯಾನಿಲಯಗಳಲ್ಲಿ 'ಸಹ-ಶಿಕ್ಷಣ' ನಿಷೇಧ..

Last Updated : Aug 22, 2021, 6:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.