ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಲಂಡನ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಇಸ್ಲಾಮಾಬಾದ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 24ರೊಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಘೋಷಿತ ಅಪರಾಧಿ ಎಂದು ಘೋಷಣೆ ಮಾಡುವುದನ್ನ ತಪ್ಪಿಸಿಕೊಳ್ಳಬೇಕಾದರೆ ಹಾಜರಾಗುವಂತೆ ಹೇಳಿದೆ. ಅಲ್ ಅಜೀಜಿಯಾ ಸ್ಟೀಲ್ ಮಿಲ್ ಮತ್ತು ಅವೆನ್ಫಿಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಇಸ್ಲಾಮಾಬಾದ್ ಹೈಕೋರ್ಟ್ ಲಿಖಿತ ಆದೇಶ ಹೊರಡಿಸಿದೆ.
ಯುಕೆಯಿಂದ ನವಾಜ್ ಷರೀಫ್ ಕರೆತರಲು ಮುಂದಾದ ಇಮ್ರಾನ್ ಖಾನ್!
ಭ್ರಷ್ಟಾಚಾರ, ಅಕ್ರಮ ಭೂ ಹಂಚಿಕೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳಲ್ಲಿ ನವಾಜ್ ಷರೀಫ್ ಭಾಗಿಯಾಗಿರುವ ಆರೋಪವಿದ್ದು, ಅವರನ್ನ ಪಾಕ್ಗೆ ಕರೆತರಲು ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯೋಜನೆ ರೂಪಿಸಿದ್ದಾರೆ. ಇದರ ಮಧ್ಯೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ, ಕೋರ್ಟ್ಗೆ ಹಾಜರಾಗಲು ವಿಫಲವಾದರೆ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.