ETV Bharat / international

ನರಿಬುದ್ದಿ ಪಾಕ್‌ನಿಂದ ಮತ್ತೆ ಶಾಂತಿ ಮಂತ್ರ​: ಮಾತುಕತೆಗೆ ಸಿದ್ಧವೆಂದ ನೆರೆ ದೇಶ - undefined

ಮುಲ್ತಾನ್​ನಲ್ಲಿ ನಡೆದ ಇಫ್ತಾರ್​ ಕೂಟವನ್ನು ಉದ್ದೇಶಿಸಿದ ಮಾತನಾಡುತ್ತಾ,ದಕ್ಷಿಣ ಏಷ್ಯಾದ ಶಾಂತಿ ವೃದ್ಧಿಸಲು ಭಾರತ- ಪಾಕಿಸ್ತಾನ ಸಂಧಾನದ ಟೇಬಲ್​ನಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕು ಎಂದು ಪಾಕ್ ವಿದೇಶಾಂದ ಸಚಿವ ಶಾ ಮೆಹಮೂದ್ ಅಭಿಪ್ರಾಯಪಟ್ಟರು.​

ಸಾಂದರ್ಭಿಕ ಚಿತ್ರ
author img

By

Published : May 26, 2019, 5:59 PM IST

ಇಸ್ಲಾಮಾಬಾದ್​: ಭಾರತದ ನೂತನ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್​ ಹೇಳಿದ್ದಾರೆ.

ಮುಲ್ತಾನ್​ನಲ್ಲಿ ನಡೆದ ಇಫ್ತಾರ್​ ಕೂಟವನ್ನು ಉದ್ದೇಶಿಸಿದ ಮಾತನಾಡಿದ ಅವರು, ದಕ್ಷಿಣ ಏಷ್ಯಾದ ಶಾಂತಿ ಸಮೃದ್ಧಿಗಾಗಿ ಭಾರತ- ಪಾಕಿಸ್ತಾನ ಸಂಧಾನದ ಟೇಬಲ್​ನಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎರಡು ದೇಶಗಳ ನಡುವೆ ಉಳಿದಿರುವ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಪರಸ್ಪರರು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅಂತಹ ಮಾತುಕತೆಗೆ ನಾವು ಸನ್ನದ್ಧರಾಗಿದ್ದೇವೆ. ಇಮ್ರಾನ್​ ಖಾನ್ ಅವರು ಮೋದಿ ನೇತೃತ್ವದ ನೂತನ ಸರ್ಕಾರದೊಂದಿಗೆ ಎಲ್ಲ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿದ್ದಾರೆ ಎಂದು ಮೆಹಮೂದ್​ ಉಲ್ಲೇಖಿಸಿದರು.

ಪುಲ್ವಾಮಾ ದಾಳಿ ಬಳಿಕದ ಪ್ರತಿ ದಾಳಿಯಿಂದ ಭಾರತ- ಪಾಕಿಸ್ತಾನ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಇದನ್ನು ತಿಳಿಗೊಳಿಸಲು ಎರಡೂ ರಾಷ್ಟ್ರಗಳು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.