ಇಸ್ಲಾಮಾಬಾದ್: ಭಾರತ ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಪ್ರಯಾಣ ನಡೆಸಿದ ಕೆಲ ದಿನಗಳಲ್ಲೇ ನೆರೆಯ ರಾಷ್ಟ್ರ ಪಾಕಿಸ್ತಾನ ಸಹ ಮಾನವ ಸಹಿತ ಬಾಹ್ಯಾಕಾಶ ಯಾನದ ಬಗ್ಗೆ ಮಾಹಿತಿ ನೀಡಿದೆ.
2022ರಲ್ಲಿ ಪಾಕಿಸ್ತಾನ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಲಿದೆ ಎಂದು ಪಾಕ್ ಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಗುರುವಾರ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 2020ರಿಂದ ಪಾಕಿಸ್ತಾನವು ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಮಾನವನನ್ನು ಕಳುಹಿಸುವ ಪ್ರಕ್ರಿಯೆ ಆರಂಭಗೊಳಿಸಲಿದ್ದು, ಈ ಕುರಿತಾಗಿ ಸದ್ಯದಲ್ಲೇ ಐವತ್ತು ಮಂದಿಯ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ಧಾರೆ.
-
Proud to announce that selection process for the first Pakistani to be sent to Space shall begin from Feb 2020,fifty people will be shortlisted — list will then come down to 25 and in 2022 we will send our first person to space,this will be the biggest space event of our history
— Ch Fawad Hussain (@fawadchaudhry) July 25, 2019 " class="align-text-top noRightClick twitterSection" data="
">Proud to announce that selection process for the first Pakistani to be sent to Space shall begin from Feb 2020,fifty people will be shortlisted — list will then come down to 25 and in 2022 we will send our first person to space,this will be the biggest space event of our history
— Ch Fawad Hussain (@fawadchaudhry) July 25, 2019Proud to announce that selection process for the first Pakistani to be sent to Space shall begin from Feb 2020,fifty people will be shortlisted — list will then come down to 25 and in 2022 we will send our first person to space,this will be the biggest space event of our history
— Ch Fawad Hussain (@fawadchaudhry) July 25, 2019
ನಂತರದಲ್ಲಿ 25 ಮಂದಿಯ ಹೆಸರನ್ನು ಅಂತಿಮ ಮಾಡಲಿದ್ದೇವೆ. 2022ರಲ್ಲಿ ಪಾಕಿಸ್ತಾನ ವ್ಯಕ್ತಿಯೋರ್ವ ಬಾಹ್ಯಾಕಾಶಕ್ಕೆ ಕಳುಹಿಸಲಿದ್ದೇವೆ. ಈ ಮೂಲಕ ಪಾಕಿಸ್ತಾನದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.