ETV Bharat / international

ಆಕಸ್ಮಿಕವಾಗಿ ಪಾಕ್ ಪ್ರವೇಶಿಸಿದ 16ರ ಪೋರ ಭಾರತಕ್ಕೆ ವಾಪಸ್​ - ವಾಘಾ ಗಡಿ

ಪಾಕ್ ಗಡಿಯೊಳಗೆ ಪ್ರವೇಶಿಸಿದ್ದ ಭಾರತದ 16ರ ಬಾಲಕ ನಿನ್ನೆ ವಾಘಾ ಗಡಿ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದಿರುಗಿದ್ದಾನೆ.

lahore
author img

By

Published : Feb 14, 2019, 2:09 PM IST

ಲಾಹೋರ್​: ಕಳೆದ ವರ್ಷ ಆಗಸ್ಟ್​ನಲ್ಲಿ ಆಕಸ್ಮಿಕವಾಗಿ ಪಾಕ್ ಗಡಿಯೊಳಗೆ ಪ್ರವೇಶಿಸಿದ್ದ ಭಾರತದ 16ರ ಬಾಲಕ ನಿನ್ನೆ ವಾಘಾ ಗಡಿ ಮೂಲಕ ಸುರಕ್ಷಿತವಾಗಿ ಹಿಂದಿರುಗಿದ್ದಾನೆ.

ಅಸ್ಸೋಂ ಮೂಲದ ಬಿಮಾನ್​ ವಾರ್ಜಿ ಎಂಬ ಬಾಲಕ ಪಾಕ್​ ಗಡಿಯೊಳಗೆ ಆಕಸ್ಮಿವಾಗಿ ಪ್ರವೇಶಿಸಿದ್ದ. ಅಲ್ಲಿನ ಕಾನೂನು ಪ್ರಕಾರ ವಿಚಾರಣೆ ಹಾಗೂ ಪರಿಶೀಲನೆ ನಡೆಸಿದ ಪಾಕ್​ ರೇಂಜರ್​ಗಳು, ಭಾರತದ ಬಾರ್ಡರ್​ ಸೆಕ್ಯುರಿಟಿ ಪೋರ್ಸ್​ಗೆ ಹಸ್ತಾಂತರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್​ 26ರಂದು ಭಾರತ ಸಹ ಇಲ್ಲಿನ ಜೈಲಿನಲ್ಲಿದ್ದ ಪಾಕ್​ನ ಮೊಹ್ಮದ್ ​ ಇಮ್ರಾನ್​ ಕುರೇಶಿ ವರ್ಸಿ ಹಾಗೂ ಅಬ್ದುಲ್​ ಎಂಬುವರನ್ನು ಅತ್ತಾರಿ-ವಾಘಾ ಗಡಿ ಮೂಲಕ ಹಸ್ತಾಂತರಿಸಲಾಗಿತ್ತು. ಅಬ್ದುಲ್​, ಬಾಲಿವುಡ್​ ನಟ ಶಾರೂಕ್​ ಖಾನ್​ರನ್ನು ಭೇಟಿಯಾಗಲು ಬಂದು, ಸಾಧ್ಯವಾಗದೆ ಪಾಕ್​ಗೆ ಹಿಂದಿರುಗುವಾಗ ಬಂಧಿತನಾಗಿದ್ದ.

ವರ್ಸಿ 2003ರಲ್ಲಿ ಇಲ್ಲಿಗೆ ಬಂದವನು, ನಾಲ್ಕು ವರ್ಷಗಳ ಕಾಲ ವೀಸಾ ಅವಧಿ ಮುಗಿದರೂ ವಾಸವಿದ್ದ. ಈ ಮಧ್ಯೆ ಭಾರತೀಯಳನ್ನೂ ಈತ ಮದುವೆಯಾಗಿದ್ದ. 2008ರಲ್ಲಿ ಅಧಿಕೃತ ರಹಸ್ಯ ಕಾಯ್ದೆ ಹಾಗೂ ಪಾಸ್​ಪೋರ್ಟ್​ ಕಾಯ್ದೆಯಂತೆ ಈತನಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

Intro:Body:

zxczx

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.