ETV Bharat / international

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಇಮ್ರಾನ್ ಪಕ್ಷಕ್ಕೆ ಗೆಲುವು; ಗಿಲ್ಗಿಟ್‌-ಬಲೂಚಿಸ್ತಾನ ಎಲೆಕ್ಷನ್‌ಗೆ ಭಾರತ ಆಕ್ಷೇಪ - ತೆಹ್ರಿಕ್​​-ಇ-ಇನ್ಸಾಫ್​ ಪಕ್ಷ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(PoK) ಇಮ್ರಾನ್​ ಖಾನ್​ ನೇತೃತ್ವದ ಪಕ್ಷ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆ ಮಾಡಲು ಮುಂದಾಗಿದೆ.

Pak PM Khan
Pak PM Khan
author img

By

Published : Jul 26, 2021, 5:18 PM IST

ಇಸ್ಲಾಮಾಬಾದ್​: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ ನೇತೃತ್ವದ ತೆಹ್ರಿಕ್​​-ಇ-ಇನ್ಸಾಫ್​ ಪಕ್ಷ ಪಾಕ್​ ಆಕ್ರಮಿತ ಕಾಶ್ಮೀರದಲ್ಲೂ ಸರ್ಕಾರ ರಚನೆ ಮಾಡಲು ಸಜ್ಜಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಇಮ್ರಾನ್​ ಪಕ್ಷ ಯಶಸ್ವಿಯಾಗಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ತೆಹ್ರಿಕ್​-ಇ-ಇನ್ಸಾಫ್​​ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಪಾಕಿಸ್ತಾನ ಪಿಪಲ್ಸ್​ ಪಾರ್ಟಿ 8 ಸ್ಥಾನ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್​-ನವಾಜ್​​​ 6 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಮುಸ್ಲಿಂ ಕಾನ್ಫರೆನ್ಸ್​​, ಜಮ್ಮು-ಕಾಶ್ಮೀರ ಪಿಪಲ್ಸ್​​ ತಲಾ 1 ಸ್ಥಾನಗಳಲ್ಲಿ ಗೆದ್ದಿದೆ ಎಂದು ತಿಳಿದು ಬಂದಿದೆ.

ಇದೀಗ ಬೇರೆ ಯಾವುದೇ ಪಕ್ಷಗಳ ಬೆಂಬಲವಿಲ್ಲದೇ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ತೆಹ್ರಿಕ್​-ಇ-ಇನ್ಸಾಫ್​ ಪಕ್ಷ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಜೊತೆಗೆ ಮೊದಲ ಸಲ ಸರ್ಕಾರ ರಚನೆ ಮಾಡುತ್ತಿರುವ ಇತಿಹಾಸ ರಚನೆ ಮಾಡಲಿದೆ. ವಿಶೇಷವೆಂದರೆ ಪಾಕ್​ನಲ್ಲಿ ಆಡಳಿತ ನಡೆಸುವ ಪಕ್ಷಗಳೇ ಇಲ್ಲಿ ಗೆಲುವು ಸಾಧನೆ ಮಾಡುತ್ತವೆ.

ಒಟ್ಟು 53 ಸ್ಥಾನಗಳಲ್ಲಿ 45 ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದ್ದು, ಐದು ಸೀಟು ಮಹಿಳೆಯರಿಗೆ ಹಾಗೂ ಮೂರು ಸ್ಥಾನ ತಂತ್ರಜ್ಞರಿಗೆ ನೀಡಲಾಗುತ್ತದೆ. ಗಿಲ್ಗಿಟ್​-ಬಲೂಚಿಸ್ತಾನ್ ಪ್ರದೇಶಗಳಲ್ಲಿ ಚುನಾವಣೆ ನಡೆಸಿದ್ದಕ್ಕಾಗಿ ಭಾರತ ಆಕ್ರೋಶ ವ್ಯಕ್ತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.