ಇಸ್ಲಾಮಾಬಾದ್: ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ ಅಲ್ಲಿನ ಅಕೌಂಟಬಿಲಿಟಿ ಕೋರ್ಟ್ ಜಾಮೀನ ಸಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಐಶಾರಾಮಿ ವಾಹನಗಳು ಹಾಗೂ ಉಡುಗೊರೆಗಳನ್ನು ಪಡೆಯಲು ಶಿಫಾರಸು ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯ ಅನುಪಸ್ಥಿತಿಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿದೆ.
ಅಕೌಂಟಬಿಲಿಟಿ ಕೋರ್ಟ್ ಜಡ್ಜ್ ಸೈಯದ್ ಅಸ್ಗರ್ ಅಲಿ ಆರೋಪಿ ಶರೀಫ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಇದರ ಜೊತೆಗೆ ಪಾಕಿಸ್ತಾನ್ ಪೀಪಲ್ ಪಾರ್ಟಿ ಸಹ ಸಂಸ್ಥಾಪಕ ಆಸೀಫ್ ಅಲಿ ಜರ್ದಾರಿ, ಮಾಜಿ ಪ್ರಧಾನಿ ಯೂಸಫ್ ರಾಝಾ ಗಿಲಾನಿ ಮತ್ತು ಇತರ ಇಬ್ಬರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ನ್ಯಾಷನಲ್ ಆಕೌಂಟಬಿಲಿಟಿ ಬ್ಯೂರೋ (NAB) ಪ್ರಕಾರ, ಗಿಲಾನಿ, ಆಸೀಫ್ ಅಲಿ ಜರ್ದಾರಿ ಮತ್ತು ನವಾಜ್ ಷರೀಫ್‌ಗೆ ಕಾನೂನು ಬಾಹಿರವಾಗಿ ಕಾರುಗಳನ್ನು ಅಲಾಟ್ ಮಾಡಿರುವ ಆರೋಪ ಹೊತ್ತಿದ್ದಾರೆ.
ಆನಾರೋಗ್ಯದಿಂದಾಗಿ ಶರೀಷ್ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪರ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಯಾರೂ ಕೂಡ ಮನವಿ ಮಾಡಿಲ್ಲ. ಇದರಿಂದಾಗಿ ಜಡ್ಜ್ ಜಾಮೀನು ನೀಡುವಂತ ಬಂಧನದ ವಾರೆಂಟ್ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆಯಲಿರುವ ಜೂನ್ 11 ರಂದು ಎಲ್ಲಾ ಆರೋಪಿಗಳು ಹಾಜರಾಗಬೇಕು ಎಂದು ಕೋರ್ಟ್ ಹೇಳಿದೆ.