ಬಲೂಚಿಸ್ತಾನ (ಪಾಕಿಸ್ತಾನ): ಬಲೂಚಿಸ್ತಾನದಲ್ಲಿ ತುಂಬಾ ವರ್ಷಗಳಿಂದ ಸ್ವಾತಂತ್ರ್ಯ ಚಳವಳಿ ನಡೆಯುತ್ತಿದೆ. ಈ ಚಳವಳಿಯನ್ನು ಹತ್ತಿಕ್ಕುವಲ್ಲಿ ಚೀನಾದ ಪಾತ್ರವೂ ಇದೆ ಎಂದು ಪಾಕಿಸ್ತಾನದ ಸೇನಾ ಜನರಲ್ಗಳಲ್ಲಿ ಒಬ್ಬರಾದ ಅಯ್ಮನ್ ಬಿಲಾಲ್ ಒಪ್ಪಿಕೊಂಡಿದ್ದಾರೆ.
ಬಾಂಗ್ಲಾದೇಶದ ದಿನಪತ್ರಿಕೆ 'ದ ಡೈಲಿ ಸನ್' ಈ ರೀತಿಯಾಗಿ ಉಲ್ಲೇಖಿಸಿದ್ದು, ಚೀನಾ ನನ್ನನ್ನು ಇಲ್ಲಿಗೆ ನಿಯೋಜಿಸಿದ್ದು, ಬಲೋಚ್ ಚಳವಳಿಯನ್ನು ಹತ್ತಿಕ್ಕಲು ಆರು ತಿಂಗಳ ಕಾಲವಕಾಶ ನೀಡಿದೆ ಎಂದು ಬಿಲಾಲ್ ಹೇಳಿದ್ದಾರೆ.
ಇರಾನ್ ರಾಷ್ಟ್ರವನ್ನು ಪಾಕಿಸ್ತಾನದ ಅತಿ ದೊಡ್ಡ ಶತ್ರು ಎಂದಿರುವ ಬಿಲಾಲ್, ಪಾಕಿಸ್ತಾನ ಸೇನೆ ಇರಾನ್ನೊಳಗೆ ನುಸುಳಿ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ತ್ರಿವರ್ಣ ಧ್ವಜಕ್ಕಾದ ಅವಮಾನದಿಂದ ಇಡೀ ರಾಷ್ಟ್ರಕ್ಕೆ ನೋವಾಗಿದೆ: 'ಮನ್ ಕಿ ಬಾತ್'ನಲ್ಲಿ ಮೋದಿ
ಚೀನಾ ನನಗೆ ವೇತನ ಮತ್ತು ಅತಿ ದೊಡ್ಡ ಮೊತ್ತದ ಹಣ ನೀಡುತ್ತಿದ್ದು, ತನ್ನ ಹಿತಾಸಕ್ತಿಗೆ ಅನುಗುಣವಾಗಿ ನನ್ನನ್ನು ಇಲ್ಲಿಗೆ ನಿಯೋಜಿಸಿದೆ. ಸಿಪೆಕ್ ವಿರುದ್ಧ ಇರಾನ್ ಪಿತೂರಿ ನಡೆಸುತ್ತಿರುವುದನ್ನೂ ತಡೆಯುತ್ತೇವೆ ಎಂದು ಬಿಲಾಕ್ ಹೇಳಿದ್ದಾರೆ.
ಇನ್ನು ಬಲೂಚಿಸ್ತಾನ ಪಾಕಿಸ್ತಾನದ ಪ್ರಾಂತ್ಯವಾಗಿದ್ದು, ಅಲ್ಲಿ ತೀವ್ರ ಬಡತನವಿದೆ. ಸುಮಾರು ವರ್ಷಗಳಿಂದ ಅಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದು, ಪಾಕಿಸ್ತಾನಕ್ಕೆ ಮುಳುವಾಗಿತ್ತು. ಅಭಿವೃದ್ಧಿ ಕಾರ್ಯಗಳೂ ಕೂಡ ಅಲ್ಲಿ ಅಲ್ಪಪ್ರಮಾಣದಲ್ಲಿವೆ.
ಪಾಕಿಸ್ತಾನಕ್ಕೆ ಬಲೂಚ್ ಚಳವಳಿ ತಲೆನೋವಾಗಿ ಪರಿಣಮಿಸಿದ್ದು, ಕೆಲವು ವರ್ಷ ಆ ಪ್ರಾಂತ್ಯದಲ್ಲಿ ಮಿಲಿಟರಿ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಈಗ ಚೀನಾ ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಪಾತ್ರ ವಹಿಸಿದೆ ಎಂದು ಅಲ್ಲಿನ ಆರ್ಮಿ ಜನರಲ್ ಹೇಳುವ ಮೂಲಕ ಪಾಕಿಸ್ತಾನದಲ್ಲಿ ಚೀನಾದ ಪ್ರಭಾವ ಕಡಿಮೆ ಇಲ್ಲ ಎಂಬ ಮಾಹಿತಿ ಹೊರಹಾಕಿದ್ದಾರೆ.