ಬಾಗ್ದಾದ್: ಇರಾಕ್ನಲ್ಲಿ ಸರ್ಕಾರದ ವಿರುದ್ಧದ ಕಳೆದ ಒಂದು ತಿಂಗಳ ಪ್ರತಿಭಟನೆಯಲ್ಲಿ ಕನಿಷ್ಟ 319 ಜನ ಸಾವನ್ನಪ್ಪಿದ್ದಾರೆ ಎಂದು ಇರಾಕ್ ಸಂಸದೀಯ ಮಾನವ ಹಕ್ಕುಗಳ ಸಮಿತಿಯ ವರದಿ ಹೇಳಿದೆ.
ಇರಾಕ್ ಭದ್ರತಾ ಪಡೆಯು ಪ್ರತಿಭಟನಾಕಾರರನ್ನು ನಿಯಂತ್ರಿಸುವ ವೇಳೆ ಬಾಗ್ದಾದ್‌ನಲ್ಲಿ ನಾಲ್ವರು ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ರಾತ್ರಿ ವೇಳೆಯೂ ಧರಣಿ ಮುಂದುವರಿಸುವ ಉದ್ದೇಶದಿಂದ ಹಾಕಲಾಗಿದ್ದ ಹಲವಾರು ಟೆಂಟ್‌ಗಳನ್ನು ಭದ್ರತಾ ಪಡೆ ಸುಟ್ಟುಹಾಕಿದೆ ಎಂದು ಇಲ್ಲಿನ ಮಾಧ್ಯಮಗಳು ತಿಳಿಸಿದೆ.
ಇರಾಕ್ ಮಾನವ ಹಕ್ಕುಗಳ ಸ್ವತಂತ್ರ ಆಯೋಗದ ಮಾಹಿತಿ ಪ್ರಕಾರ ಸುಮಾರು 15,000 ಜನರು ಗಾಯಗೊಂಡಿದ್ದಾರೆ.
ರಾಜಧಾನಿ ಬಾಗ್ದಾದ್ ಹಾಗೂ ದೇಶದ ಹಲವು ಪ್ರಾಂತ್ಯಗಳಲ್ಲಿ ನಿರುದ್ಯೋಗ ಸಮಸ್ಯೆ, ಸರ್ಕಾರದ ಭ್ರಷ್ಟಾಚಾರ ಮತ್ತು ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯುತ್ ಮತ್ತು ಶುದ್ಧ ನೀರಿನ ಅಭಾವದಿಂದಾಗಿ ರೊಚ್ಚಿಗೆದ್ದಿರುವ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.