ರಿಯಾದ್: ಭಾರತದಲ್ಲಿ ತೈಲ ಬೆಲೆ ಸದ್ಯ ಏರಿಕೆಯ ಹಾದಿಯಲ್ಲೇ ಸಾಗಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಅತಿ ಹೆಚ್ಚು ತೈಲ ರಫ್ತು ಮಾಡುವ ಸೌದಿ ಅರೇಬಿಯಾ ಭಾರಿ ಬೆಲೆ ಏರಿಕೆಯ ಮಾತುಗಳನ್ನಾಡಿದೆ.
ತೈಲ ಬೆಲೆ ಮುಂದಿನ ಕೆಲವೇ ದಿನಗಳಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಏರಿಕೆಯಾಗಲಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಭಾರತದಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆಗೆ ಸೌದಿ ಅರೇಬಿಯಾ ಚಿಂತನೆ
ಇತ್ತೀಚೆಗೆ ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರ ಹಿಂದೆ ಇರಾನ್ ಕೈವಾಡ ಇದೆ ಎನ್ನಲಾಗಿದ್ದು, ಈ ವಿಚಾರವನ್ನೂ ಸೌದಿ ರಾಜಕುಮಾರ ಸಂದರ್ಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಇರಾನ್ ದೇಶದ ಕೆಲ ಚಟುವಟಿಕೆಗಳನ್ನು ಹತ್ತಿಕ್ಕದಿದ್ದಲ್ಲಿ ಜಾಗತಿಕವಾಗಿ ಬಹುದೊಡ್ಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿಶ್ವದಲ್ಲಿ ತೈಲ ರಫ್ತಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾವು ಈವರೆಗೂ ನೋಡಿರದಮಟ್ಟಕ್ಕೆ ತೈಲ ಬೆಲೆ ಏರಿಕೆಯಾಗಲಿದೆ ಸೌದಿ ರಾಜಕುಮಾರ ಜಗತ್ತಿನ ಅಗ್ರದೇಶಗಳನ್ನು ಎಚ್ಚರಿಸಿದ್ದಾರೆ.