ಸಿಯೋಲ್ (ಉತ್ತರ ಕೊರಿಯಾ): ಅಮೆರಿಕದ ಮಿಲಿಟರಿ ಬೆದರಿಕೆಗಳ ವಿರುದ್ಧ ಬಲಶಾಲಿಯಾದ ಸೇನೆಯನ್ನು ನಿರ್ಮಿಸುವುದಾಗಿ ಉತ್ತರ ಕೊರಿಯಾ ತಿಳಿಸಿದೆ.
ವರ್ಷದ ಹಿಂದೆ ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್-ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಐತಿಹಾಸಿಕ ಶೃಂಗಸಭೆಯ ಬಳಿಕ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ಉಂಟಾಗಿಲ್ಲ.
ಅಮೆರಿಕದಿಂದ ಇರುವ ದೀರ್ಘಕಾಲದ ಮಿಲಿಟರಿ ಬೆದರಿಕೆಗಳನ್ನು ನಿಭಾಯಿಸಲು ಉತ್ತರ ಕೊರಿಯಾ ಸುರಕ್ಷಿತ ಕಾರ್ಯತಂತ್ರದ ಮೊರೆ ಹೋಗಿದೆ. ಇದರ ಜೊತೆಗೆ, ಶಕ್ತಿಶಾಲಿ ಹಾಗು ವಿಶ್ವಾಸಾರ್ಹ ಸೇನಾ ಬಲವನ್ನು ನಿರ್ಮಿಸುವ ಗುರಿ ಹೊಂದಿದೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ರಿ ಸೊನ್-ಗ್ವಾನ್ ಹೇಳಿದ್ದಾರೆ.