ETV Bharat / international

ಉತ್ತರ ಕೊರಿಯಾದಿಂದ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ.. ವಿಶ್ವದ ದೊಡ್ಡಣ್ಣನ ವಿರುದ್ಧ ರಣತಂತ್ರ?

ಉತ್ತರ ಕೊರಿಯಾ - ಅಮೆರಿಕ ನಡುವೆ ಪರಮಾಣು ವಿಚಾರವಾಗಿ ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ, ಉತ್ತರ ಕೊರಿಯಾ ಕ್ರೂಸ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಹೇಳಿದೆ.

ಕ್ರೂಸ್ ಕ್ಷಿಪಣಿ
ಕ್ರೂಸ್ ಕ್ಷಿಪಣಿ
author img

By

Published : Sep 13, 2021, 7:08 AM IST

ಸಿಯೋಲ್: ದೀರ್ಘಶ್ರೇಣಿಯ ಕ್ರೂಸ್​ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ. ಉತ್ತರ ಕೊರಿಯಾ - ಅಮೆರಿಕ ಮಧ್ಯೆ ಪರಮಾಣು ವಿಚಾರವಾಗಿ ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ, ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿದೆ.

ಎರಡು ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದ ಕ್ರೂಸ್ ಕ್ಷಿಪಣಿಗಳು ಶನಿವಾರ ಮತ್ತು ಭಾನುವಾರ ತನ್ನ ವಿಮಾನ ಪರೀಕ್ಷೆಯ ಸಮಯದಲ್ಲಿ 1,500 ಕಿಲೋಮೀಟರ್ (932 ಮೈಲಿ) ಗುರಿಯನ್ನು ಯಶಸ್ವಿಯಾಗಿ ದಾಟಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಹೇಳಿದೆ.

ಈ ಕ್ಷಿಪಣಿಗಳು ಮಿಲಿಟರಿ ಬಲಪಡಿಸಲು ಸಹಕಾರಿಯಾಗಲಿದ್ದು, ಆ ಮೂಲಕ ಕಿಮ್​ ಜಾಂಗ್​​ ಉನ್​ ಕರೆಯನ್ನು ಪೂರೈಸುವ ಮಹತ್ವದ ಕಾರ್ಯ ವಿಧಾನ ಇದಾಗಿದೆ. 2021 ರ ಜನವರಿಯಲ್ಲಿ ಉತ್ತರ ಕೊರಿಯಾದ ಮೇಲೆ ಅಮೆರಿಕ ನಿರ್ಬಂಧಗಳು, ಒತ್ತಡ ಹೆಚ್ಚಾದ ಹಿನ್ನೆಲೆ ಕಿಮ್,​ ಪರಮಾಣು ನಿರೋಧಕವನ್ನು ದ್ವಿಗುಣಗೊಳಿಸುವ ಶಪಥ ಮಾಡಿದ್ದರು. ಇದರ ಭಾಗವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಗೆ ಅವರು ಹೆಚ್ಚು ಒತ್ತು ನೀಡಿದರು. ಉತ್ತರ ಕೊರಿಯಾದ ಪರೀಕ್ಷೆಗಳನ್ನು ದಕ್ಷಿಣ ಕೊರಿಯಾದ ಸೇನೆಯು ದೃಢಪಡಿಸಿಲ್ಲ.

ಇದನ್ನೂ ಓದಿ: ಮಂಗಳನಲ್ಲಿ ವಾಸ ಯೋಗ್ಯ ಪರಿಸರ ಇದೆಯಾ?... ಕಲ್ಲಿನ ಮಾದರಿ ಹೇಳುವ ಕಥೆ ಏನು?

2019 ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್​ ನಡುವಿನ ಚರ್ಚೆ ವಿಫಲವಾಯಿತು. ಅಮೆರಿಕವು ತನ್ನ ಪರಮಾಣು ಸಾಮರ್ಥ್ಯಗಳ ಭಾಗಶಃ ಶರಣಾಗತಿಗೆ ಬದಲಾಗಿ ಪ್ರಮುಖ ನಿರ್ಬಂಧಗಳ ಪರಿಹಾರಕ್ಕಾಗಿ ಉತ್ತರ ಕೊರಿಯಾದ ಬೇಡಿಕೆಯನ್ನು ತಿರಸ್ಕರಿಸಿತು. ವಾಷಿಂಗ್ಟನ್​ ತನ್ನ ಪ್ರತಿಕೂಲ ನೀತಿಗಳನ್ನು ಕೈ ಬಿಡಬೇಕೆಂದು ಉತ್ತರಕೊರಿಯಾ ಆಗ್ರಹಿಸುತ್ತಲೇ ಇದೆ. ಆದರೆ, ಬೈಡನ್​ ಸರ್ಕಾರ ಉತ್ತರ ಕೊರಿಯಾದೊಂದಿಗೆ ಈವರೆಗೆ ಯಾವುದೇ ಮಾತುಕತೆ ನಡೆಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.