ಅಬುದಾಬಿ: ಬಿಎಲ್‌ಎಸ್ ಅಂತಾರಾಷ್ಟ್ರೀಯ ಕೇಂದ್ರಗಳಲ್ಲಿ ಸಲ್ಲಿಸಬೇಕಾದ ಪಾಸ್‌ಪೋರ್ಟ್ ನವೀಕರಣ ಅರ್ಜಿಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ಯುಎಇ ಸರ್ಕಾರ ನಿರ್ಧರಿಸಿದೆ ಎಂದು ಅಬುದಾಬಿಯ ಭಾರತೀಯ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.
ಪಾಸ್‌ಪೋರ್ಟ್ ನವೀಕರಣ ಕಾರ್ಯವನ್ನು ಕೋವಿಡ್-19 ಸಾಂಕ್ರಾಮಿಕ ಮತ್ತು ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನ ಹಾರಾಟದ ತಾತ್ಕಾಲಿಕ ನಿಷೇಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ಹಿಂದೆ ಅಬುದಾಬಿ ಸರ್ಕಾರವು ನಿರ್ಬಂಧಗಳನ್ನು ಜಾರಿಗೆ ತಂದಿತ್ತು. ಆ ಬಳಿಕ ಜೂನ್ 21ರಂದು ಭಾರತೀಯ ರಾಯಭಾರ ಕಛೇರಿಯು ಪಾಸ್‌ಪೋರ್ಟ್ ನವೀಕರಣ ಅರ್ಜಿಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಮನವಿ ಸಲ್ಲಿಸಿದ್ದು, ಜುಲೈ 15ರಂದು ಈಗ ಯುಎಇ ಅಧಿಕಾರಿಗಳು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅರ್ಜಿದಾರರಿಗೆ ನವೀಕರಣ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ.
-
Advisory on Passport Services - effective from 15 July 2020@cgidubai @HelpPbsk pic.twitter.com/ZALgTz37Vs
— India in UAE (@IndembAbuDhabi) July 8, 2020 " class="align-text-top noRightClick twitterSection" data="
">Advisory on Passport Services - effective from 15 July 2020@cgidubai @HelpPbsk pic.twitter.com/ZALgTz37Vs
— India in UAE (@IndembAbuDhabi) July 8, 2020Advisory on Passport Services - effective from 15 July 2020@cgidubai @HelpPbsk pic.twitter.com/ZALgTz37Vs
— India in UAE (@IndembAbuDhabi) July 8, 2020
ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಹಿರಿಯ ನಾಗರಿಕರು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಮತ್ತು ವಿಶೇಷ ಚೇತನರ ದೈಹಿಕ ಸಾಮಾರ್ಥ್ಯ ಪರೀಕ್ಷಿಸಿ ವಿನಾಯಿತಿ ನೀಡಲಾಗುತ್ತದೆ.
ಎಲ್ಲಾ ಅರ್ಜಿದಾರರು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ. ಸಾಮಾಜಿಕ ಅಂತರ, ಮಾಸ್ಕ್ಗಳನ್ನು ಧರಿಸಿ ಎಂದು ರಾಯಭಾರ ಕಚೇರಿ ಸೂಚಿಸಿದೆ.
ಕಳೆದ ತಿಂಗಳು, ಭಾರತೀಯ ವೀಸಾ ಮತ್ತು ಪಾಸ್‌ಪೋರ್ಟ್ ಅರ್ಜಿ ಸಂಸ್ಕರಣಾ ಸೇವೆಗಳನ್ನು ಒದಗಿಸುವ ಹೊರಗುತ್ತಿಗೆ ಸಂಸ್ಥೆ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಎಲ್ಲಾ 10 ಕೇಂದ್ರಗಳಲ್ಲಿ ಆನ್‌ಲೈನ್ ಅಪಾಯಿಂಟ್ಮೆಂಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು.