ಯುಎಇ: ಜಗತ್ತಿನಾದ್ಯಂತ ಕೋವಿಡ್ ಹಾಗೂ ರೂಪಾಂತರಿ ವೈರಸ್ ಅಬ್ಬರಿಸುತ್ತಿದ್ದು ತೈಲ ರಾಷ್ಟ್ರ ಯುಎಇ ಕಠಿಣ ನಿರ್ಬಂಧಗಳ ಮೊರೆ ಹೋಗಿದೆ. ಎರಡು ಲಸಿಕೆಗಳನ್ನು ಪಡೆಯದವರು ಜನವರಿ 10 ರಿಂದ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆ ಪ್ರಾಧಿಕಾರ ಈ ಆದೇಶ ಹೊರಡಿಸಿದ್ದು, ಎರಡೂ ಲಸಿಕೆಗಳನ್ನು ಪಡೆದು ವಿದೇಶಕ್ಕೆ ಪ್ರಯಾಣಿಸಲು ಅರ್ಹರಿರುವ ನಾಗರಿಕರು, ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂತಲೂ ಹೇಳಿದೆ.
ವಿಶ್ವದಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದೆ. ನಿನ್ನೆ ಒಂದೇ ದಿನ ಜಗದಗಲ 16 ಲಕ್ಷ ಕೇಸ್ ದಾಖಲಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಕೋವಿಡ್ ಆರ್ಭಟಿಸುತ್ತಿದೆ. ಡಿಸೆಂಬರ್ 25ರ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಬಳಿಕ ಸೋಂಕು ಉಲ್ಬಣಿಸುತ್ತಿದೆ.
ಇದನ್ನೂ ಓದಿ: ಚೀನಾ ಪ್ರಾಬಲ್ಯಕ್ಕೆ ಕಡಿವಾಣ: ಭಾರತೀಯರಿಗೆ ಅಗ್ಗವಾಗಲಿದೆ ಬ್ರಿಟನ್ ವೀಸಾ